ರಾಜೀನಾಮೆ ಬಳಿಕ ಪ್ರತಿಕ್ರಿಯೆ ನೀಡಿರುವ ರಮಣ್ ಸಿಂಗ್, "ಜನತೆ 3 ಬಾರಿ ಆಡಳಿತ ನಡೆಸಲು ಅವಕಾಶ ನೀಡಿದ್ದರು, ನನ್ನ ಜೀವನ ಪೂರ್ತಿ ಕೆಲಸ ಮಾಡಿದರೂ ಜನತೆ ನನಗೆ ನೀಡಿರುವ ಪ್ರೀತಿ ಗೌರವಗಳನ್ನು ಹಿಂತಿರುಗಿಸುವುದಕ್ಕೆ ಆಗುವುದಿಲ್ಲ". ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದ್ದೇನೆ. ನನ್ನ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಿದ್ದು, ಸೋಲಿನ ಹೊಣೆಯನ್ನೂ ನಾನೇ ಹೊರುತ್ತೇನೆ ಎಂದಿದ್ದಾರೆ.