ರಾಷ್ಟ್ರ ರಾಜಕರಾಣದಲ್ಲೂ ಸಕ್ರಿಯನಾಗುವೆ: 2019 ರ ಚುನಾವಣೆ ತಂತ್ರದ ಸುಳಿವು ನೀಡಿದ ಕೆಸಿಆರ್

ತೆಲಂಗಾಣದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಿರುವ ಟಿಆರ್ ಎಸ್ ನಾಯಕ ಚಂದ್ರಶೇಖರ್ ರಾವ್ ರಾಷ್ಟ್ರರಾಜಕಾರಣದಲ್ಲೂ ಸಕ್ರಿಯರಾಗುವುದಾಗಿ ಘೋಷಿಸಿದ್ದಾರೆ.
ಕೆಸಿಆರ್
ಕೆಸಿಆರ್
Updated on
ಹೈದರಾಬಾದ್: ತೆಲಂಗಾಣದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಿರುವ ಟಿಆರ್ ಎಸ್ ನಾಯಕ ಚಂದ್ರಶೇಖರ್ ರಾವ್ ರಾಷ್ಟ್ರರಾಜಕಾರಣದಲ್ಲೂ ಸಕ್ರಿಯರಾಗುವುದಾಗಿ ಘೋಷಿಸಿದ್ದಾರೆ. 
ಫಲಿತಾಂಶ ಪ್ರಕಟಗೊಂಡ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಕೆಸಿಆರ್, ನಾನು ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲೂ ಸಕ್ರಿಯನಾಗಿರುತ್ತೇನೆ, ಬೇರೆ ಪಕ್ಷಗಳ ನಾಯಕರೊಂದಿಗೂ ಮಾತುಕತೆ ನಡೆಸಿದ್ದು, ರಾಷ್ಟ್ರೀಯ ರಂಗದ ನಾಯಕರು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುತ್ತೇವೆ ಎಂದು ಹೇಳಿದ್ದಾರೆ. 
ತೆಲಂಗಾಣದಲ್ಲಿ ಟಿಆರ್ ಎಸ್ ಗೆಲುವು ತೆಲಂಗಾಣ ರಾಜ್ಯದ ಜನತೆಯ ಗೆಲುವಾಗಿದೆ. ಎಲ್ಲಾ ಮತದಾರರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಕೆಸಿಆರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com