ರಾಮಮಂದಿರದ ಬೆನ್ನು ಬಿದ್ದ ಬಿಜೆಪಿಗೆ 'ರಾಮ್ ನಾಮ್ ಸತ್ಯ ಹೇ' ಎನ್ನುವುದನ್ನು ಜನರು ಖಾತ್ರಿ ಪಡಿಸಿದ್ದಾರೆ: ಎನ್ ಸಿಪಿ

ಪಂಚ ರಾಜ್ಯಗಳ ವಿಧಾನಸಭೆಯಲ್ಲಿ ಬಿಜೆಪಿ ಪರಾಭವ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಮುಂಬೈ ಎನ್ ಸಿಪಿ ಮುಖ್ಯ ವಕ್ತಾರ ನವಾಬ್ ಮಲಿಕ್ .....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಮುಂಬೈ: ಪಂಚ ರಾಜ್ಯಗಳ ವಿಧಾನಸಭೆಯಲ್ಲಿ ಬಿಜೆಪಿ ಪರಾಭವ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಮುಂಬೈ ಎನ್ ಸಿಪಿ ಮುಖ್ಯ ವಕ್ತಾರ ನವಾಬ್ ಮಲಿಕ್ "ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ದಲ್ಲಿ ಕೇದ್ಸರಿ ಪಕ್ಷದ ಅಭ್ಯರ್ಥಿಗಳ  "ಅಹಂಕಾರ" ಅವರಿಗೆ ಮುಳುವಾಗಿದೆ.2019 ಸಾರ್ವತ್ರಿಕ ಚುನಾವಣೆಯಲ್ಲಿ ಎನ್ ಡಿಎ ಸರ್ಕಾರಕ್ಕೆ ದೇಶದ ಜನತೆ "ಶುಭವಿದಾಯ" ಹೇಳಲಿದ್ದ್ದಾರೆ ಎಂದರು.
ನರೇಂದ್ರ ಮೋದಿ ಸರಕಾರದ "ಜನ ವಿರೋಧಿ ಮತ್ತು ರೈತರ ವಿರೋಧಿ" ನೀತಿಗಳೇ ಅವರನ್ನು ಸೋಲಿನ ದಾರಿಗೆ ನೂಕಿದೆ ಇಂದು ಐದು ರಾಜ್ಯಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಿಲ್ಲ.ಬಿಜೆಪಿ ನಾಯಕರ  ಸೊಕ್ಕಿನ ಮಾತುಗಳು, ಅಹಂಕಾರದ ವಿರುದ್ಧ ಜನರು ಮತ ಚಲಾಯಿಸಿದ್ದಾರ" ಎಂದು ಮಲಿಕ್ ಹೇಳಿದರು
 ನಿರುದ್ಯೋಗ ಬಿಕ್ಕಟ್ಟು ಮತ್ತು ಜಿಎಸ್ಟಿ ಮತ್ತು ನೀಟ್ ಬ್ಯಾನ್ ನಂತಹಾ ಸರ್ಕಾರದ ಕ್ರಮಗಳು ಚುನಾವಣೆ  ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳೀದ್ದಾರೆ.
ಬಿಜೆಪಿಯು ತನ್ನದೇ ರಾಜ್ಯಗಳಲ್ಲಿ ಸೋಲು ಅನುಭವಿಸಿದ ರೀತಿಯಲ್ಲಿಯೇ 2019 ರ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಾನಿಯಾಗಲಿದೆ.ಇಷ್ಟಕ್ಕೂ ಈ ಚುನಾವಣೆಯಲ್ಲಿ ಬಿಜೆಪಿ ಸೋಲು ಕಟ್ಟಿಟ್ಟದ್ದು ಎನ್ನುವುದನ್ನು ಆರ್ ಎಸ್ ಎಸ್ ಮೊದಲೇ ತಿಳಿದಿತ್ತು. ಆದ್ದರಿಂದಅದು ರಾಮಮಂದಿರ ವಿವಾದವನ್ನು ಎತ್ತಿತ್ತು.ಆದರೆ ಜನರು ಬಿಜೆಪಿಗೆ "ರಾಮ ಣಾಮ್ ಸತ್ಯ ಹೇ" ಎನ್ನುವುದನ್ನು ಖಾತರಿ ಪಡಿಸಿದ್ದಾರೆ ಎಂದು ಮಹಾರಾಷ್ಟ್ರದ ಮಾಜಿ ಸಚಿವರಾದ ಮಲಿಕ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com