ವಿರೋಧಿಗಳಿಗೆ 'ಪಪ್ಪು' ಆಗಿದ್ದ ರಾಹುಲ್ ಇದೀಗ ಅವರಿಗೆ ಪರಮ ಪೂಜ್ಯರಾಗಿ ಹೋಗಿದ್ದಾರೆ: ರಾಜ್ ಠಾಕ್ರೆ

ಒಮ್ಮೆ ವಿರೋಧ ಪಕ್ಷದ ನಾಯಕರಿಗೆ 'ಪಪ್ಪು' ಆಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಪರಮ ಪೂಜ್ಯರಾಗಿ ಹೋಗಿದ್ದಾರೆಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಯವರು ಬುಧವಾರ ವ್ಯಂಗ್ಯವಾಡಿದ್ದಾರೆ...
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ
ಮುಂಬೈ: ಒಮ್ಮೆ ವಿರೋಧ ಪಕ್ಷದ ನಾಯಕರಿಗೆ 'ಪಪ್ಪು' ಆಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಪರಮ ಪೂಜ್ಯರಾಗಿ ಹೋಗಿದ್ದಾರೆಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಯವರು ಬುಧವಾರ ವ್ಯಂಗ್ಯವಾಡಿದ್ದಾರೆ. 
ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಜ್ ಠಾಕ್ರೆಯವರು, ಗುಜರಾತ್ ನಲ್ಲಿ ರಾಹುಲ್ ಒಬ್ಬರೇ ಇದ್ದರು, ಕರ್ನಾಟಕದಲ್ಲೂ ಒಂಟಿಯಾಗಿಯೇ ಇದ್ದರು. ಇದೀಗ ಪಪ್ಪು ಕೆಲವರಿಗೆ ಪರಮ ಪೂಜ್ಯರಾಗಿ ಹೋಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲೂ ಅವರ ನಾಯಕತ್ವನ್ನು ಒಪ್ಪಿಕೊಳ್ಳುತ್ತಾರಾ? ಅದನ್ನು ನೋಡೋಣ ಎಂದು ಹೇಳಿದ್ದಾರೆ. 
ಇದು ಆಗಲೇ ಬೇಕಿತ್ತು. ಅಮಿತ್ ಶಾ ಹಾಗೂ ಮೋದಿಯವರು ಕಳೆದ ನಾಲ್ಕು ವರ್ಷಗಳಿಂದ ನಡೆದುಕೊಂಡ ರೀತಿಯಿಂದಾಗಿ ಭಾರತ ಜನತೆಗೆ ಸ್ಪಷ್ಟ ಚಿತ್ರಣ ತೊರೆದಿದೆ. ರಾಮ ಮಂದಿರ ವಿಚಾರವನ್ನಿಟ್ಟುಕೊಂಡು ಆಟವಾಡಿದ್ದಾರೆಂಬುದು ಅವರಿಗೆ ತಿಳಿದಿದೆ. ಜನರು ಕೂಡ ಬುದ್ಧಿವಂತರೇ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com