ನವದೆಹಲಿ: ಪಂಜಾಬ್ ಮತ್ತು ಹರ್ಯಾಣ ಡಿಜಿಪಿಗಳು ಜನವರಿ 31ರವರೆಗೆ ಕಚೇರಿಯಲ್ಲಿ ಮುಂದುವರಿಯಲಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಪಂಜಾಬ್ ಡಿಜಿಪಿ ಸುರೇಶ್ ಅರೋರಾ ಮತ್ತು ಹರ್ಯಾಣ ಬಿಎಸ್ ಸಂಧು ಅವರು ಡಿಸೆಂಬರ್ 31ರಂದು ನಿವೃತ್ತಿಯಾಗಲಿದ್ದಾರೆ.
ಯುಪಿಎಸ್ ಸಿ ನೇಮಕಾತಿಯಲ್ಲಿ ಅವ್ಯವಹಾರ ಸಂಬಂಧ ಇಬ್ಬರನ್ನು ಬದಲಾಯಿಸಲು ನಿರ್ಧರಿಸಲಾಗಿತ್ತು, ಪೊಲೀಸ್ ಮುಖ್ಯಸ್ಱರ ನೇಮಕಾತಿಗೆ ಪ್ರತ್ಯೇಕ ಕಾನೂನು ತರಬೇಕೆಂದು ರಾಜ್ಯ ಸರ್ಕಾರ ತಿಳಿಸಿದೆ,
ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರನ್ನೊಳಗೊಂಡ ಪೀಠ ಡಿಜಿಪಿ ಅವರು 2019 ರ ಜನವರಿ 31ರವರೆಗೆ ಮುಂದುವರಿಯಲು ಅವಕಾಶ ನೀಡುವಂತೆ ಆದೇಶಿಸಿದೆ.