ರಾಫೆಲ್ ತೀರ್ಪು: ಸಿಎಜಿ ವರದಿ ಉಲ್ಲೇಖದಲ್ಲಿ ಕೆಲವು ತಿದ್ದುಪಡಿ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇಂದ್ರ!

ರಾಫೆಲ್ ಜೆಟ್ ಒಪ್ಪಂದಕ್ಕೆ ಸಂಬಂಧಿಸಿದ ತೀರ್ಪಿನಲ್ಲಿ ಸಿಎಜಿ ವರದಿಯ ಕುರಿತ ಸುಪ್ರೀಂ ಕೋರ್ಟ್ ಉಲ್ಲೇಖದಲ್ಲಿ ಕೆಲವು ತಿದ್ದುಪಡಿಯಾಗಬೇಕಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ರಾಫೆಲ್ ಜೆಟ್ ಒಪ್ಪಂದಕ್ಕೆ ಸಂಬಂಧಿಸಿದ ತೀರ್ಪಿನಲ್ಲಿ ಸಿಎಜಿ ವರದಿಯ ಕುರಿತ ಸುಪ್ರೀಂ ಕೋರ್ಟ್ ಉಲ್ಲೇಖದಲ್ಲಿ ಕೆಲವು ತಿದ್ದುಪಡಿಯಾಗಬೇಕಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 
ಸುಪ್ರೀಂ ಕೋರ್ಟ್ ರಾಫೆಲ್ ಜೆಟ್ ಕುರಿತು ತೀರ್ಪು ಪ್ರಕಟಿಸುವಾಗ ಸಿಎಜಿ ವರದಿ ಹಾಗೂ ಸಾರ್ವಜನಿಕ ಲೆಕ್ಕ ಸಮಿತಿಯ ಬಗ್ಗೆ ಉಲ್ಲೇಖಿಸಿತ್ತು. ಈ ಉಲ್ಲೇಖ ಇರುವ ವಾಕ್ಯದಲ್ಲಿ ಕೆಲವು ತಿದ್ದುಪಡಿಗಳಾಗಬೇಕಿದೆ ಎಂದು ಕೇಂದ್ರ ಸರ್ಕಾರ ಈಗ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. 
ಸಿಎಜಿ ಹಾಗೂ ಪಿಎಸಿ ಗೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಸಲ್ಲಿಸಲಾಗಿತ್ತು. ಈ ದಾಖಲೆಗಳ ವಿಷಯವನ್ನು ತಪ್ಪಾಗಿ ವ್ಯಾಖ್ಯಾನ ಮಾಡಲಾಗಿ ಎಂಬುದನ್ನು ಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕಾಗಿದ್ದು ಅರ್ಜಿ ಸಲ್ಲಿಸಲಾಗಿದೆ ಎಂದು ಕಾನೂನು ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ. 
"ರಾಫೆಲ್ ಜೆಟ್ ಖರೀದಿ ಮೊತ್ತದ ವಿವರಗಳನ್ನು ಸಿಎಜಿ ಜೊತೆ ಹಂಚಿಕೊಳ್ಳಲಾಗಿದೆ, ಸಿಎಜಿ ವರದಿಯನ್ನು ಪಿಎಸಿಯೂ ಪರಿಶೀಲಿಸಿದೆ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿತ್ತು. ತೀರ್ಪಿನ 25 ನೇ ವಾಕ್ಯದಲ್ಲಿ ಸುಪ್ರೀಂ ಕೋರ್ಟ್ ಸಿಎಜಿ ಹಾಗೂ ಪಿಎಸಿಯ ಬಗ್ಗೆ ಉಲ್ಲೇಖ ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com