

ರಾಯಪುರ: ಛತ್ತೀಸ್ ಗಢ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಾಘೆಲ್ ಅವರನ್ನು ಛತ್ತೀಸ್ ಗಡದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷ ಇಂದು ಆಯ್ಕೆ ಮಾಡಿದೆ.
ರಾಯಪುರದಲ್ಲಿ ಇಂದು ನಡೆದ ಶಾಸಕಾಂಗ ಸಭೆಯ ನಂತರ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಲಾಯಿತು.
ಛತ್ತೀಸ್ ಗಡದ ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದ ಭೂಪೇಶ್ ಬಾಘೆಲ್ ಹಾಗೂ ಇತರ ಮೂವರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಲ್ಲಿ ನಿನ್ನೆ ಚರ್ಚೆ ನಡೆಸಿದ್ದರು.
ಭೂಪೇಶ್ ಬಾಘೆಲ್ ,ಟಿಎಸ್ ಸಿಂಗ್ ಡಿಯೊ, ತಮರಾಧ್ವಾಜ್ ಸಾಹು ಹಾಗೂ ಚರಣ್ ದಾಸ್ ಮೆಹಂತ ಅವರೊಂದಿಗೆ ತುಘಲಕ್ ಲೇನ್ ನಲ್ಲಿರುವ ನಿವಾಸದಲ್ಲಿ ರಾಹುಲ್ ಗಾಂಧಿ ಹಲವು ಸುತ್ತಿನ ಚರ್ಚೆ ನಡೆಸಿದ್ದರು.