6 ವರ್ಷಗಳ ನಂತರ ಪಾಕ್‌ ಜೈಲಿನಲ್ಲಿದ್ದ ಮುಂಬೈ ಇಂಜಿನಿಯರ್ ಬಿಡುಗಡೆ

ಗೂಡಾಚಾರ ಆರೋಪದ ಮೇಲೆ ಪಾಕಿಸ್ತಾನಲ್ಲಿ ಜೈಲು ಪಾಲಾಗಿದ್ದ ಮುಂಬೈ ಮೂಲದ ಇಂಜಿನಿಯರ್ ಹಮೀದ್ ನಿಹಾಲ್....
ಹಮೀದ್ ನಿಹಾಲ್ ಅನ್ಸಾರಿ
ಹಮೀದ್ ನಿಹಾಲ್ ಅನ್ಸಾರಿ
ನವದೆಹಲಿ: ಗೂಡಾಚಾರ ಆರೋಪದ ಮೇಲೆ ಪಾಕಿಸ್ತಾನಲ್ಲಿ ಜೈಲು ಪಾಲಾಗಿದ್ದ   ಮುಂಬೈ ಮೂಲದ ಇಂಜಿನಿಯರ್ ಹಮೀದ್ ನಿಹಾಲ್ ಅನ್ಸಾರಿ ಅವರನ್ನು ಆರು ವರ್ಷಗಳ ನಂತರ ಪಾಕ್ ಸರ್ಕಾರ ಬಿಡುಗಡೆ ಮಾಡಿದ್ದು, ಮಂಗಳವಾರ ಅತ್ತಾರಿ-ವಾಗಾ ಗಡಿ ಮೂಲಕ ಭಾರತಕ್ಕೆ ಮರಳಿದ್ದಾರೆ.
ಹಮೀದ್ ಜೈಲು ಶಿಕ್ಷೆ ಡಿಸೆಂಬರ್ 15ರಂದು ಅಂತ್ಯಗೊಂಡಿದ್ದು, ಶಿಕ್ಷೆ ಮುಗಿದ ತಕ್ಷಣ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿದ್ದ ಹಿನ್ನೆಲೆಯಲ್ಲಿ ಇಂದು ಬಿಡುಗಡೆಯ ಭಾಗ್ಯ ಸಿಕ್ಕಿದೆ.
ಹೌದು, ಇದೊಂದು ನಿಜಕ್ಕೂ ಉತ್ತಮ ಸುದ್ದಿ. ಪಾಕಿಸ್ತಾನ ಜೈಲಿನಿಂದ ಹಮೀದ್ ಅವರನ್ನು ಬಿಡುಗಡೆ ಮಾಡಲಾಗಿದೆ. ವಾಗಾ ಗಡಿಯಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಪಾಕಿಸ್ತಾನ-ಇಂಡಿಯಾ ಪೀಪಲ್ಸ್ ಫೋರಂ ಪ್ರಧಾನ ಕಾರ್ಯದರ್ಶಿ ಜತಿನ್ ದೇಸಾಯಿ ಅವರು ತಿಳಿಸಿದ್ದಾರೆ.
ಹಮೀದ್ ಅವರ ತಂದೆ ನೆಹಾಲ್ ಅವರು ಸೇರಿದಂತೆ ಹಲವು ಕುಟುಂಬ ಸದಸ್ಯರು ಅವರನ್ನು ಬರಮಾಡಿಕೊಂಡರು.
ಅನ್ಸಾರಿ ನವೆಂಬರ್ 12, 2012ರಂದು, ಸ್ನೇಹಿತೆಯೊಬ್ಬರನ್ನು ಬಲವಂತದ ಮದುವೆಯಿಂದ ಕಾಪಾಡಲು ಫೇಸ್‌ಬುಕ್ ಸ್ನೇಹಿತರೊಬ್ಬರು ಕಳುಹಿಸಿದ್ದ ನಕಲಿ ಗುರುತುಪತ್ರದ ಮೂಲಕ ಅಫಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದರು. ದುರದೃಷ್ಟವಶಾತ್ ಗುಪ್ತಚರ ಅಧಿಕಾರಿಗಳ ಕೈಗೆ ಸಿಕ್ಕು ಜೈಲು ಪಾಲಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com