ಸಿಬಿಐ ಒಳಜಗಳ: ಸಿಬಿಐ ಹೆಚ್ಚುವರಿ ನಿರ್ದೇಶಕರಾಗಿ ನಾಗೇಶ್ವರ್ ರಾವ್ ನೇಮಕ!

ಸಿಬಿಐ ಒಳಜಗಳ ಹಿನ್ನೆಲೆಯಲ್ಲಿ ಹಂಗಾಮಿ ನಿರ್ದೇಶಕರಾಗಿ ನೇಮಕಗೊಂಡಿದ್ದ ನಾಗೇಶ್ವರ್ ರಾವ್ ರನ್ನು ಇದೀಗ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ನಾಗೇಶ್ವರ್ ರಾವ್
ನಾಗೇಶ್ವರ್ ರಾವ್
ನವದೆಹಲಿ: ಸಿಬಿಐ ಒಳಜಗಳ ಹಿನ್ನೆಲೆಯಲ್ಲಿ ಹಂಗಾಮಿ ನಿರ್ದೇಶಕರಾಗಿ ನೇಮಕಗೊಂಡಿದ್ದ ನಾಗೇಶ್ವರ್ ರಾವ್ ರನ್ನು ಇದೀಗ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. 
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ಆ ಬಳಿಕ ನಾಗೇಶ್ವರ್ ರಾವ್ ರನ್ನು ಹಂಗಾನಿ ನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ನೇಕಮ ಮಾಡಿತ್ತು. 
ನಾಗೇಶ್ವರ್ ರಾವ್ 1986ರ ಬ್ಯಾಚ್ ನ ಒಡಿಶಾ ಕೇಡರ್ ನ ಅಧಿಕಾರಿಯಾಗಿದ್ದು ಕೇಂದ್ರ ಸಂಪುಟ ಸಮಿತಿ ಅವರನ್ನು ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಕ ಮಾಡಿದೆ. 
ಭ್ರಷ್ಟಾಚಾರದ ಆರೋಪ ಹೊತ್ತುಕೊಂಡಿರುವ ಗುಜರಾತ್ ಕೇಡರ್ ನ ಅಧಿಕಾರಿ ರಾಕೇಶ್ ಆಸ್ಥಾನ ಅವರ ಎಲ್ಲಾ ಅಧಿಕಾರಗಳನ್ನು ಮೊಟುಕುಗೊಳಿಸಿ ಕಡ್ಡಾಯ ರಜೆ ಮೇಲೆ ಅವರನ್ನು ಕಳುಹಿಸಲಾಗಿತ್ತು. ಇನ್ನು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರಿಗೂ ಇದೇ ಸೂಚನೆ ಪಾಲಿಸುವಂತೆ ಸರ್ಕಾರ ಸೂಚಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com