ಭಜರಂಗಿ ಬಲಿ ಹನುಮಾನ್ ಮುಸ್ಲಿಂ- ಬಿಜೆಪಿ ಎಂಎಲ್ ಸಿ

ಭಜರಂಗಿ ಬಲಿ ಹನುಮಾನ್ ಮುಸ್ಲಿಂ ಎಂದು ಉತ್ತರ ಪ್ರದೇಶದ ಬಿಜೆಪಿ ಎಂಎಲ್ ಸಿ ಬುಕ್ಕಾಲ್ ನವಾಬ್ ಹೇಳಿದ್ದಾರೆ.
ಬುಕ್ಕಾಲ್ ನವಾಬ್
ಬುಕ್ಕಾಲ್ ನವಾಬ್
Updated on: 

ಲಖನೌ: ಹನುಮಾನ್ ದಲಿತ ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದಂತೆ  ಈಗ  ಅವರದೇ ಪಕ್ಷದ  ವಿಧಾನಪರಿಷತ್ ಸದಸ್ಯರೊಬ್ಬರು  ಹನುಮಾನ್  ಮುಸ್ಲೀಂ ಎಂದು ಹೇಳುವ ಮೂಲಕ ಈ ಕುರಿತ ಚರ್ಚೆಗೆ ಮತ್ತಷ್ಟು ಟ್ವಿಸ್ಟ್ ನೀಡಿದ್ದಾರೆ.

ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿರುವ ವಿಧಾನಪರಿಷತ್ ಸದಸ್ಯ  ಬುಕ್ಕಾಲ್ ನವಾಬ್, ಮುಸ್ಲಿಂರ ಬಹಳಷ್ಟು ಹೆಸರುಗಳು  ಹನುಮಾನ್ ಹೆಸರಿಗೆ ಹೋಲಿಕೆಯಾಗುತ್ತವೆ. ಹನುಮಾನ್ ಮುಸ್ಲಿಂ ಎಂಬುದು ನನ್ನ ನಂಬಿಕೆಯಾಗಿದೆ  ಎಂದು ಅವರು ಹೇಳಿದ್ದಾರೆ.
ಇತ್ತೀಚಿಗೆ  ರಾಜಸ್ತಾನ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ  ಹನುಮಾನ್ ದಲಿತ ಎಂದು  ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ವಿವಿಧ ರಾಜಕೀಯ ಪಕ್ಷಗಳಿಂದ ತೀವ್ರ ಟೀಕೆಗಳು ಎದುರಾಗಿದ್ದವು.
ಹನುಮಾನ್ ದಲಿತ ಆದರೆ,  ಜಾತಿ ಹೆಸರು ಬಹಿರಂಗಗೊಳಿಸುವಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್  ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com