ದೇಶ
2019 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ: ಕಮಲ್ ಹಾಸನ್
2019ರ ಲೋಕಸಬಾ ಚುನಾವಣೆಯಲ್ಲಿ ನಮ್ಮ ಪಕ್ಷ ಮಕ್ಕಳ್ ನಿಧಿ ಮೈಯಂ ಖಂಡಿತವಾಗಿಯೂ ಸ್ಪರ್ಧೆಗಿಳಿಯುತ್ತದೆ ಎಂದು ನಟ ಕಮಲ್ ಹಾಸನ್ ಶನಿವಾರ ಹೇಳಿದ್ದಾರೆ...
ಚೆನ್ನೈ: 2019ರ ಲೋಕಸಬಾ ಚುನಾವಣೆಯಲ್ಲಿ ನಮ್ಮ ಪಕ್ಷ ಮಕ್ಕಳ್ ನಿಧಿ ಮೈಯಂ ಖಂಡಿತವಾಗಿಯೂ ಸ್ಪರ್ಧೆಗಿಳಿಯುತ್ತದೆ ಎಂದು ನಟ ಕಮಲ್ ಹಾಸನ್ ಶನಿವಾರ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗಿಯೂ ನಾನು ಸ್ಪರ್ಧಿಸುತ್ತೇನೆಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಖಚಿತವಾಗಿ ಹೇಳಿರುವ ಕಮಲ್ ಹಾಸನ್ ಅವರು, ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಅವರ ನಡೆ ಇನ್ನೂ ರಹಸ್ಯವಾಗಿಯೇ ಇದೆ.
ತಮಿಳು ಅಭಿವೃದ್ಧಿಯತ್ತ ನಮ್ಮ ಪಕ್ಷ ಗಮನ ಹರಿಸುತ್ತಿದ್ದು, ಉತ್ತಮ ಮನಸ್ಸುಳ್ಳು ಪಕ್ಷದೊಂದಿಗೆ ಮೈತ್ರಿಕೊಳ್ಳಲು ಸಿದ್ಧವಿದ್ದೇವೆ. ತಮಿಳುನಾಡಿನ ಡಿಎನ್ಎಯನ್ನು ಬದಲಾಯಿಸಲು ಯತ್ನ ನಡೆಸುವ ಯಾವುದೇ ಪಕ್ಷದೊಂದಿಗೂ ನಾವು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಕೆಲ ತಿಂಗಳುಗಳ ಹಿಂದಷ್ಟೇ ರಾಜಕೀಯ ಪ್ರವೇಶಿಸಿದ್ದ ಕಮಲ್ ಹಾಸನ್ ಅವರು, ಮಕ್ಕಳ್ ನಿಧಿ ಮೈಯಂ ಪಕ್ಷವನ್ನು ಸ್ಥಾಪನೆ ಮಾಡಿದ್ದರು.