9000 ಫೋನ್, 500 ಇ-ಮೇಲ್ ಮೇಲೆ ಬೇಹುಗಾರಿಕೆ ನಡೆಸಿದ್ದ ಯುಪಿಎ ಸರ್ಕಾರ!

ಮೋದಿ ಸರ್ಕಾರದ ವಿರುದ್ಧ ದೇಶಾದ್ಯಂತ ಕಂಪ್ಯೂಟರ್ ಗಳ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ಆರೋಪ ಮಾಡಿದ್ದ ಕಾಂಗ್ರೆಸ್ ಈಗ ಸ್ವತಃ ಇಂತಹದ್ದೇ ಆರೋಪ ಎದುರಿಸಬೇಕಾಗಿದೆ.
9000 ಫೋನ್, 500 ಇ-ಮೇಲ್ ಮೇಲೆ ಬೇಹುಗಾರಿಕೆ ನಡೆಸಿದ್ದ ಯುಪಿಎ ಸರ್ಕಾರ!
9000 ಫೋನ್, 500 ಇ-ಮೇಲ್ ಮೇಲೆ ಬೇಹುಗಾರಿಕೆ ನಡೆಸಿದ್ದ ಯುಪಿಎ ಸರ್ಕಾರ!
ನವದೆಹಲಿ: ಮೋದಿ ಸರ್ಕಾರದ ವಿರುದ್ಧ ದೇಶಾದ್ಯಂತ ಕಂಪ್ಯೂಟರ್ ಗಳ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ಆರೋಪ ಮಾಡಿದ್ದ ಕಾಂಗ್ರೆಸ್ ಈಗ ಸ್ವತಃ ಇಂತಹದ್ದೇ ಆರೋಪ ಎದುರಿಸಬೇಕಾಗಿದೆ. 
ಆರ್ ಟಿಐ ಮಾಹಿತಿಯೊಂದರ ಪ್ರಕಾರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 9000 ಫೋನ್, 500 ಇ-ಮೇಲ್ ಮೇಲೆ ಬೇಹುಗಾರಿಕೆ ನಡೆಸಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಬರೊಬ್ಬರಿ 9,000 ಫೋನ್ ಗಳು ಹಾಗೂ 500 ಇ-ಮೇಲ್ ಖಾತೆಗಳ ಮೇಲೆ ಪ್ರತಿ ತಿಂಗಳು ನಿಗಾ ವಹಿಸಲಾಗುತ್ತಿತ್ತು ಎಂದು ಆರ್ ಟಿಐ ಅರ್ಜಿಗೆ ನೀಡಲಾಗಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. 
ಪ್ರತಿ ತಿಂಗಳು ಸರಾಸರಿ ಟೆಲಿಫೋನ್ ಬೇಹುಗಾರಿಕೆ, ಹಾಗೂ 300-500 ಇ-ಮೇಲ್ ಬೇಹುಗಾರಿಕೆಗೆ ಅನುಕ್ರಮವಾಗಿ 7.500-9,000 ಹಾಗೂ 300-500 ಆದೇಶ ಸರ್ಕಾರದಿಂದ ಬರುತ್ತಿತ್ತು ಎಂದು  ಸ್ವಾಮಿ ಅಮೃತಾನಂದ ಎಂಬುವವರು ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರ ನೀಡಲಾಗಿದೆ.  ಕೇಂದ್ರ ಸರ್ಕಾರ ದೇಶದಲ್ಲಿರುವ ಎಲ್ಲಾ ಕಂಪ್ಯೂಟರ್ ಗಳ ಮೇಲೆ ನಿಗಾ ವಹಿಸಲು 10  ಕೇಂದ್ರೀಯ ಸಂಸ್ಥೆಗಳಿಗೆ ಆದೇಶ ನೀಡಿತ್ತು. ಈ ಬಗ್ಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com