ಸಾಂದರ್ಭಿಕ ಚಿತ್ರ
ದೇಶ
ಉತ್ತರ ಪ್ರದೇಶ: 2013ರ ಮುಜಾಫರ್ ನಗರ ಗಲಭೆ ಆರೋಪಿ ಶವವಾಗಿ ಪತ್ತೆ
2013ರ ಮುಜಾಫರ್ ನಗರ ಗಲಭೆ ಆರೋಪಿ ಶಿಖೇದಾ ಗ್ರಾಮದಲ್ಲಿ ನಿಗೂಡವಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ....
ಮುಜಾಫರ್ ನಗರ್: 2013ರ ಮುಜಾಫರ್ ನಗರ ಗಲಭೆ ಆರೋಪಿ ಶಿಖೇದಾ ಗ್ರಾಮದಲ್ಲಿ ನಿಗೂಡವಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋದನ್ ಸಿಂಗ್ ಶವ ಭಾನುವಾರ ಸಂಜೆ ತನ್ನ ಕೊಠಡಿಯ ಸೀಲಿಂಗ್ ನಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ,
ಸಿಂಗ್ ಪುತ್ರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ 60 ವರ್ಷದ ತಂದೆಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಆತ ಆರೋಪಿಸಿದ್ದಾನೆ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
2013 ರಲ್ಲಿ ನಡೆದ ಮುಜಾಫರ್ ನಗರದಲ್ಲಿ ನಡೆದ ಕೋಮುಗಲಭೆಯಲ್ಲಿ 60 ಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 40 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ