ಬಂಗಾಳ ಪೊಲೀಸರು ಸಮವಸ್ತ್ರಕ್ಕೆ ತಕ್ಕಂತೆ ವರ್ತಿಸುತ್ತಿಲ್ಲ: ಬಿಜೆಪಿ ಅಧ್ಯಕ್ಷ

ಪಶ್ಚಿಮ ಬಂಗಾಳದಲ್ಲಿ ಬಾಂಬ್ ತಯಾರಿಸುತ್ತಿರುವ ಆರೋಪ ಹೊತ್ತಿರುವ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ರಾಜ್ಯ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಅಸಮಾಧಾನ ವ್ಯಕ್ತಪಡಿಸಿದ್ದು
ಬಂಗಾಳ ಪೊಲೀಸರು ಸಮವಸ್ತ್ರಕ್ಕೆ ತಕ್ಕಂತೆ ವರ್ತಿಸುತ್ತಿಲ್ಲ: ಬಿಜೆಪಿ ಅಧ್ಯಕ್ಷ
ಬಂಗಾಳ ಪೊಲೀಸರು ಸಮವಸ್ತ್ರಕ್ಕೆ ತಕ್ಕಂತೆ ವರ್ತಿಸುತ್ತಿಲ್ಲ: ಬಿಜೆಪಿ ಅಧ್ಯಕ್ಷ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಾಂಬ್ ತಯಾರಿಸುತ್ತಿರುವ ಆರೋಪ ಹೊತ್ತಿರುವ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ರಾಜ್ಯ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಅಸಮಾಧಾನ ವ್ಯಕ್ತಪಡಿಸಿದ್ದು, ಪೊಲೀಸರು ಸಮವಸ್ತ್ರಕ್ಕೆ ತಕ್ಕಂತೆ ವರ್ತಿಸುತ್ತಿಲ್ಲ ಎಂದು ಹೇಳಿದ್ದಾರೆ. 
ಪಶ್ಚಿಮ ಬಂಗಾಳದ ಪೊಲೀಸರು ಯಾರೂ ಸಮವಸ್ತ್ರಕ್ಕೆ ತಕ್ಕಂತೆ ವರ್ತಿಸುತ್ತಿಲ್ಲ, ಎಲ್ಲಕ್ಕಿಂತ ಮಿಗಿಲಾಗಿ ನಮ್ಮನ್ನು ಅವಮಾನ ಮಾಡುತ್ತಿದ್ದೀರ. ಜಾರ್ಖಂಡ್ ನಿಂದ ರಾಜ್ಯಕ್ಕೆ ಬರುತ್ತಿರುವವರು ಬಾಂಬ್ ತಯಾರಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ. ಆದರೂ ಪೊಲೀಸರು ಉದ್ದೇಶಪೂರ್ವಕವಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಏಕೆಂದರೆ ಅವರಿಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನ ಬೆಂಬಲವಿದೆ ಎಂದು ದಿಲೀಪ್ ಘೋಷ್ ಗಂಭೀರ ಆರೋಪ ಮಾಡಿದ್ದಾರೆ. 
ಪಶ್ಚಿಬ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟ ಪ್ರಕರಣಗಳು ಸಂಭವಿಸಿದ್ದು, ಡಿ.23 ರಂದು ಮುರ್ಷಿರಾಬಾದ್ ನಲ್ಲಿ ಸಿಐಡಿ ತಂಡದ ಬಾಂಬ್ ಸ್ಕ್ವಾಡ್  ಸೆಣಬು ಚೀಲದಲ್ಲಿಟ್ಟಿದ್ದ 6 ಕಚ್ಚಾ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com