ಪತ್ನಿಯನ್ನು ಕೊಂದು 7 ತಿಂಗಳು ಫೇಸ್‍ಬುಕ್ ನಲ್ಲಿ ಅವಳನ್ನು ಜೀವಂತ ಇಟ್ಟ ವೈದ್ಯ!

ಪ್ರಸಿದ್ದ ವೈದ್ಯನೊಬ್ಬ ತನ್ನ ಮಾಜಿ ಪತ್ನಿಯನ್ನು ಕೊಂದು ಬಳಿಕ ಪೋಲೀಸರಿಂದ ತಪ್ಪಿಸಿಕೊಳ್ಳುವುದಕ್ಕೆ ಆಕೆಯ ಸಾಮಾಜಿಕ ತಾಣವನ್ನು ತಿಂಗಳುಗಟ್ಟಲೆ ಸಕ್ರಿಯವಾಗಿಟ್ಟಿದ್ದ ಘಟನೆ....
ರಾಖಿ
ರಾಖಿ
ಗೋರಖ್‍ಪುರ್: ಪ್ರಸಿದ್ದ ವೈದ್ಯನೊಬ್ಬ ತನ್ನ ಮಾಜಿ ಪತ್ನಿಯನ್ನು ಕೊಂದು ಬಳಿಕ ಪೋಲೀಸರಿಂದ ತಪ್ಪಿಸಿಕೊಳ್ಳುವುದಕ್ಕೆ ಆಕೆಯ ಸಾಮಾಜಿಕ ತಾಣವನ್ನು ತಿಂಗಳುಗಟ್ಟಲೆ ಸಕ್ರಿಯವಾಗಿಟ್ಟಿದ್ದ ಘಟನೆ ಉತ್ತರ ಪ್ರದೇಶದ  ಗೋರಖ್‍ಪುರ್ ನಲ್ಲಿ ನಡೆದಿದೆ.
ಗೋರಖ್‍ಪುರ್ ನ ಪ್ರಸಿದ್ದ ಶಸ್ತ್ರ ಚಿಕಿತ್ಸಕ ವೈದ್ಯನಾಗಿದ್ದ ಧರ್ಮೇಂದ್ರ ಪ್ರತಾಪ್ ಸಿಂಗ್ ಎಂಬಾತ ತನ್ನ ಮಾಜಿ ಪತ್ನಿ  ರಾಖಿ ಅಲಿಯಾಸ್ ರಾಜೇಶ್ವರಿಯನ್ನು ಕಳೆದ ಜೂನ್ ನಲ್ಲಿ  ನೇಪಾಳದ ಪ್ರೋಖ್ರಾ ಪರ್ವತದ ತುದಿಯಿಂದ ದೂಡಿ ಹತ್ಯೆಗೈದಿದ್ದ. ಆದರೆ ಆಕೆ ಅಸ್ಸಾಂ ನಲ್ಲಿ ಆಕೆ ಜೀವಂತವಾಗಿದ್ದಾರೆ ಎನ್ನುವಂತೆ ಆಕೆಯ ಫೇಸ್‍ಬುಕ್ ಖಾತೆಯನ್ನು ಆರು ತಿಂಗಳಿನಿಂದಲೂ ಸಕ್ರಿಯವಾಗಿಟ್ಟಿದ್ದ.
ಇದೀಗ ಏಳು ತಿಂಗಳ ಬಳಿಕ ಪೋಲೀಸರು ಕಡೆಗೂ ಪ್ರಕರಣ ಬೇಧಿಸಿದ್ದು ಆರೋಪಿ ಧರ್ಮೇಂದ್ರ ಹಾಗೂ ಆತನ ಸಹಚರರಾದ ಪ್ರಮೋದ್ ಕುಮಾರ್ ಸಿಂಗ್, ರಮೇಶ್ ದೀಪಕ್ ನಿಶಾದೆನ್ನುವವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಜೂನ್ ನಲ್ಲಿ ರಾಖಿ ತನ್ನ ಎರಡನೇ ಪತಿ ಮನೀಶ್ ಎಂಬಾತನೊಡನೆ ನೇಪಾಳಕ್ಕೆ ಪ್ರವಾಸ ತೆರಳಿದ್ದಳು. ಆದರೆ ಹಿಂತಿರುಗುವ ವೇಳೆ ಮನೀಶ್ ಮಾತ್ರವೇ ಬಂದಿದ್ದು ರಾಖಿ ನಾಪತ್ತೆ ಕುರಿತಂತೆ ಆಕೆಯ ಸೋದರ ಪೋಲೀಸರಿಗೆ ದೂರಿತ್ತಿದ್ದಾರೆ. ಆದರೆ ರಾಖಿಯ ಫೇಸ್‍ಬುಕ್ ಖಾತೆಯಲ್ಲಿ ಆಕೆ ಅಸ್ಸಾಂ ನಲ್ಲಿರುವಂತೆ ಬಿಂಬಿಸಲಾಗಿತ್ತಾದ ಕಾರಣ ಅವಳ ಕುಟುಂಬಸ್ಥರು ಅವಳು ಅಲ್ಲಿಯೇ ಇರುವಳೆಂದು ನಂಬಿದ್ದರು.
ನಾಪತ್ತೆ ಪ್ರಕರಣ ವಿಚಾರಣೆ ನಡೆಸುತ್ತಿದ್ದ ಪೋಲೀಸರು ರಾಳಿಯ ಎರಡನೇ ಪತಿ ಮನೀಶ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ನೇಪಾಳದಿಂದ ನಾನೊಬ್ಬನೇ ಬಂದಿದ್ದೆ, ರಾಖಿ ಅಲ್ಲಿಯೇ ಉಳಿದುಕೊಂಡಳೆಂದು ಹೇಳಿದ್ದಾನೆ. ಆಗ ರಾಖಿಯ ಮೊಬೈಲ್ ಟ್ರ್ಯಾಪ್ ಮಾಡಿದ್ದ ಪೋಲೀಸರು ರಾಖಿ ಹತ್ಯೆಯಾಗಿರುವುದನ್ನು ಪತ್ತೆ ಮಾಡಿದ್ದಾರೆ. ಅಲ್ಲದೆ ನಿಜ ಆರೋಪಿಗಳ ಸುಳಿವನ್ನೂ ಪಡೆದಿದ್ದಾರೆ.
ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಯ ಪೋಲೀಸರು ಈ ಪ್ರಕರಣವನ್ನು ಬೇಧಿಸಿದ್ದು ರಾಖಿ ಹತ್ಯೆ ಆರೋಪಿ ಆಕೆಯ ಎರಡನೇ ಪತಿ ಮನೀಶ್ ಆಗಿರದೆ ಮೊದಲ ಪತಿ ಧರ್ಮೇಂದ್ರ ಎನ್ನುವುದನ್ನು ಕಂಡುಕೊಂಡಿದ್ದಾರೆ. ರಾಖಿ ಹಣ ಹಾಗೂ ಆಸ್ತಿಯ ವಿಚಾರವಾಗಿ ತನ್ನ ಮೊದಲ ಪತಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಅದಕ್ಕಾಗಿ ಆತ ಈ ಕುಕೃತ್ಯ ಎಸಗಿದ್ದಾರೆ. ಗೋರಖ್‍ಪುರ್ ನಲ್ಲಿ ನರ್ಸಿಂಗ್ ಹೋ ನಡೆಸುತ್ತಿದ್ದ. ರಾಖಿ ನೇಪಾಳಕ್ಕೆ ಹೋದಾಗಲೇ ತಾನೂ ಅಲ್ಲಿಗೆ ತೆರಳಿ ಆಕೆಯನ್ನು ಹತ್ಯೆ ಮಾಡುವುದಕ್ಕೆ ಯೋಜನೆ ರೂಪಿಸಿದ್ದನು ಎಂದು ಪೋಲೀಸರು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com