ಹನುಮಂತನ ಬಗ್ಗೆ ತಮ್ಮ ನಾಯಕರ ಹೇಳಿಕೆ ಕುರಿತು ಬಿಜೆಪಿ ಸ್ಪಷ್ಟನೆ ನೀಡಲಿ: ಅಧೋಕ್ಷಜಾನಂದ ಸ್ವಾಮಿ

ಭಗವಾನ್ ಹನುಮಂತನ ಬಗ್ಗೆ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆ ಬಗ್ಗೆ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಶಂಕರಾಚಾರ್ಯ ಅಧೋಕ್ಷಜಾನಂದ್ ದೇವ್ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.
ಹನುಮಂತ
ಹನುಮಂತ
ಮಥುರಾ: ಭಗವಾನ್ ಹನುಮಂತನ ಬಗ್ಗೆ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆ ಬಗ್ಗೆ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಶಂಕರಾಚಾರ್ಯ ಅಧೋಕ್ಷಜಾನಂದ್ ದೇವ್ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ. 
ಉತ್ತರ ಪ್ರದೇಶದ ಧಾರ್ಮಿಕ ದತ್ತಿ ಇಲಾಖೆ ಸಚಿವ ಲಕ್ಷ್ಮಿ ನಾರಾಯಣ್ ಚೌಧರಿ ಹನುಮಂತನನ್ನು ಜಾಟ್ ಸಮುದಾಯಕ್ಕೆ ಸೇರಿದವನೆಂದು ಹೇಳಿದ್ದರು. ಇದಕ್ಕೂ ಮುನ್ನ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹನುಮಂತ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂದು ಹೇಳಿದ್ದರು, ಈ ಮಧ್ಯೆ ಬಿಜೆಪಿ ಎಂಎಲ್ ಸಿ ನವಾಬ್ ಹನುಮಂತ ಮುಸ್ಲಿಂ ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂತ ಶಂಕರಾಚಾರ್ಯ ಅಧೋಕ್ಷಜಾನಂದ ದೇವ್ ತೀರ್ಥ, ಒಂದೆಡೆ ಬಿಜೆಪಿ ಕಾಲ ಕಾಲಕ್ಕೆ ರಾಮ ಮಂದಿರ ವಿಷಯವನ್ನು ಮುನ್ನೆಲೆಗೆ ತರುತ್ತದೆ, ಮತ್ತೊಂದೆಡೆ ಅದರ ನಾಯಕರು ಹಿಂದೂ ದೇವತೆಗಳ ಬಗ್ಗೆ ಅಸಂಬದ್ಧ ಹೇಳಿಕೆ ನೀಡುತ್ತಾರೆ ಈ ಬಗ್ಗೆ ಬಿಜೆಪಿ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಅಗ್ರಹಿಸಿದ್ದಾರೆ.
ಹನುಮಂತನಿಗೆ ರಾಮ ತನ್ನ ಸಹೋದರನ ಸ್ಥಾನ ನೀಡಿದ್ದ, ಹನುಮಂತ ಇಲ್ಲದೇ ರಾಮ ಮಂದಿರ ನಿರ್ಮಾಣ ಅಸಾಧ್ಯ ಒಂದು ವೇಳೆ ಹನುನಂತ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಎಂಬ ಬಿಜೆಪಿ ಪಕ್ಷದ ಎಂಎಲ್ ಸಿ ಹೇಳಿಕೆಯನ್ನು ಬಿಜೆಪಿ ಹೈಕಮಾಂಡ್ ಅನುಮೋದಿಸುವುದಾದರೆ ಮಂದಿರದ ಬದಲು ಹನುಮಂತನಿಗೆ ಮಸೀದಿ ನಿರ್ಮಾಣ ಮಾಡಬೇಕಾಗುತ್ತದೆ ಎಂದು   ಶಂಕರಾಚಾರ್ಯ ಅಧೋಕ್ಷಜಾನಂದ್ ದೇವ್ ತೀರ್ಥ ಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ. 
ಹನುಮಂತನ ಕುರಿತ ಬಿಜೆಪಿ ನಾಯಕರ ಹೇಳಿಕೆಗಳು ರಾಮ ಮಂದಿರವನ್ನು ಅವರು ಮತಗಳಿಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಆದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ಸಂತರು ಹಾಗೂ ಧರ್ಮಾಚಾರ್ಯರುಗಳಿಂದ ಎಂದು ಶಂಕರಾಚಾರ್ಯ ದೇವ್ ತೀರ್ಥ ಸ್ವಾಮಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com