ಕುಮಾರಿಕಟ(ಅಸ್ಸಾಂ): ಮನೆಯಲ್ಲಿ ಇಲಿಗಳಿದ್ದರೆ ದವಸ ಧಾನ್ಯಗಳಿಗೆಲ್ಲಾ ಕುತ್ತು ಎಂದು ಭಾವಿಸಿ ನಾವುಗಳು ಇಲಿಗಳಿಗೆ ವಿಷವಿಟ್ಟು ಕೊಲ್ಲುತ್ತೇವೆ, ಇಲ್ಲವೇ ಬೋನಿಗೆ ಸಿಕ್ಕಿಸಿ ಹೊರಹಾಕುತ್ತೇವೆ. ಆದರೆ ಇದೇ ಇಲಿಗಳಿಗೆ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಒಳ್ಳೆಯ ಬೇಡಿಕೆ ಇದೆ ಎಂದರೆ ನಂಬುವಿರಾ?
ಹೌದು ಅಸ್ಸಾಂನ ಕುಮಾರಿಕಟ ಗ್ರಾಮದಲ್ಲಿ ನಡೆಯುವ ಸಂತೆಯಲ್ಲಿ ಕೋಳಿ, ಕುರಿ ಮತ್ತಿತರೆ ಮಾಂಸಗಳಿಗಿಂತಲೂ ಆಗಷ್ಟೇ ಹಿಡಿದು ಚರ್ಮ ಸುಲಿದಿರುವ ಇಲಿಗಳ ಮಾಂಸಕ್ಕೆ ಭಾರೀ ಬೇಡಿಕೆ ಇದೆ. ಈ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ವಸ್ತುಗಳಲ್ಲಿ ಇಲಿ ಮಾಂಸವೂ ಒಂದು!
ಬೆಳೆಗಳ ರಕ್ಷಣೆಗಾಗಿ ರೈತರು ಇಲಿಗಳನ್ನು ಹಿಡಿಯುತ್ತಾರೆ. ಇಂತಹಾ ಇಲಿಗಳನ್ನು ಇಲ್ಲಿನ ವ್ಯಾಪಾರಿಗಳು ಖರೀದಿಸಿ ಮಾರಾಟ ನಡೆಸುತ್ತಾರೆ.
ಸ್ಥಳೀಯ ಬಡವರು, ಬುಡಕಟ್ಟು ಜನಾಂಗದವರಿಗೆ ಇಲಿಗಳ ವ್ಯಾಪಾರ ಪ್ರಮುಖ ಆದಾಯ ಮೂಲವಾಗಿ ಪರಿಣಮಿಸಿದೆ.
ಈ ಮಾರುಕಟ್ಟೆಯಲ್ಲಿ ಒಂದು ಕೆಜಿ ಇಲಿಯ ಮಾಂಸಕ್ಕೆ200 ರು. ಬೆಲೆ ಇದೆ! "ಬೆಳೆ ನಾಶ ಮಾಡುವ ಇಲಿಗಳನ್ನು ಹಿಡಿಯಲಿಉಕ್ಕಾಗಿ ನಾವು ಬೋನುಗಳನ್ನಿಡುತ್ತೇವೆ, ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಇಲಿಗಳ ಹಾವಳಿ ಘೆಚ್ಚಾಗಿದೆ" ಕುಮಾರಿಕಟದ ವ್ಯಾಪಾರಿ ಸಾಂಬಾ ಸೊರೆನ್ ಹೇಳಿದ್ದಾರೆ.
ರಾತ್ರಿ ವೇಳೆ ವ್ಯಾಪಾರಿಗಳು ಬೋನಿನಲ್ಲಿ ಸ್ಕ್ಕಿಹಾಕಿಕೊಳ್ಳುವ ಇಲಿಗಳಿಗಾಗಿ ಕಾದು ಕುಳಿತಿರುತ್ತಾರೆ. . ಕೆಲವು ಇಲಿಗಳು ಒಂದು ಕಿಲೋಗ್ರಾಮ್ಗಿಂತ ಹೆಚ್ಚು ತೂಗುತ್ತದೆಒಂದು ರಾತ್ರಿಯಲ್ಲಿ ಏನಿಲ್ಲವೆಂದರೂ 10 ರಿಂದ 20 ಕಿಲೋಗ್ರಾಂಗಳಷ್ಟು ತೂಕದ ಇಲಿಗಳು ಸಿಗುತ್ತವೆ ಎಂದು ವ್ಯಾಪಾರಿಗಳು ಮಾಹಿತಿ ನೀಡಿದರು.