ಜಲಿಯನ್ವಾಲಾಬಾಗ್, ಹತ್ಯಾಕಾಂಡ ಕುರಿತು ಚಿತ್ರ ಮಾಡಿದಾಗ ಸತ್ಯ ಸಂಗತಿ ಬದಲಿಸಲಾಗದು: ಅನುಪಮ್ ಖೇರ್

ಜಲಿಯನ್ವಾಲಾಬಾಗ್ ಅಥವಾ ಹತ್ಯಾಕಾಂಡ ಕುರಿತು ಚಿತ್ರಗಳನ್ನು ಮಾಡಿದಾಗ ಸತ್ಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಟ ಅನುಪಮ್ ಖೇರ್ ಅವರು ಶುಕ್ರವಾರ ಹೇಳಿದ್ದಾರೆ...
ಅನುಪಮ್ ಖೇರ್
ಅನುಪಮ್ ಖೇರ್
ಮುಂಬೈ: ಜಲಿಯನ್ವಾಲಾಬಾಗ್ ಅಥವಾ ಹತ್ಯಾಕಾಂಡ ಕುರಿತು ಚಿತ್ರಗಳನ್ನು ಮಾಡಿದಾಗ ಸತ್ಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಟ ಅನುಪಮ್ ಖೇರ್ ಅವರು ಶುಕ್ರವಾರ ಹೇಳಿದ್ದಾರೆ. 
 ಡಾ.ಮನಮೋಹನ್ ಸಿಂಗ್ ಅವರ ಜೀವನಾಧಾರಿತ ಚಿತ್ರ 'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರ ಕುರಿತು ಎದ್ದಿರುವ ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು,  ಸಂಜಯ ಬರು ಅವರು ಬರೆದಿರುವ ಪುಸ್ತಕವನ್ನು ಆಧರಿಸಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಜಲಿಯನ್ವಾಲಾಬಾಗ್, ಹತ್ಯಾಕಾಂಡ ಅಥವಾ ಐತಿಹಾಸಿಕ ಘಟನೆಗಳ ಸಂಬಂಧ ನಾವು ಚಿತ್ರಗಳನ್ನು ಮಾಡಿದಾಗ ಇತಿಹಾಸ ಅಥವಾ ಸತ್ಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಇದನ್ನೇ ನಾವು ಚಿತ್ರದಲ್ಲಿ ಮಾಡಿದ್ದೇವೆಂದು ಹೇಳಿದ್ದಾರೆ. 
ಅಂದಿನ ಪ್ರಧಾನಮಂತ್ರಿಗಳಿಗೆ ಆಪ್ತರಾಗಿದ್ದ ವ್ಯಕ್ತಿಯೇ ಬರೆದಿದ್ದ ಪುಸ್ತಕವನ್ನು ಆಧರಿಸಿ ನಾವು ಚಿತ್ರವನ್ನು ಮಾಡಿದ್ದೇವೆ. ಈ ಪುಸ್ತಕವನ್ನು ತಿರಸ್ಕರಿಸುವಂತಿಲ್ಲ. ಚಿತ್ರ ಬಿಡುಗಡೆಯಾಗ ಬಳಿಕ ಜನರೇ ಈ ಬಗ್ಗೆ ನಿರ್ಧರಿಸುತ್ತಾರೆ. ಈಗೇಕೆ ಚಿತ್ರಕ್ಕೆ ಇಷ್ಟೊಂದು ಬಣ್ಣವನ್ನು ನೀಡುತ್ತಿದ್ದಾರೆ. 
ನಾನೊಬ್ಬ ಕೇವಲ ನಟನಷ್ಟ ಚಿತ್ರದಲ್ಲಿ ಸಮರ್ಥ ರೀತಿಯಲ್ಲಿ ಪಾತ್ರಕ್ಕೆ ಜೀವ ತುಂಬಿದ್ದೇನೆ. ಚಿತ್ರಕ್ಕಾಗಿ ನಾನು ಸಾಕಷ್ಟು ಶ್ರಮಪಟ್ಟಿದ್ದೇನೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com