ಕೇರಳ: ಗೆಳತಿಯನ್ನು ಮದುವೆಯಾಗಲು ಲಿಂಗಪರಿವರ್ತನೆ ಮಾಡಿಸಿಕೊಂಡ ಯುವತಿ!

ಯುವತಿಯೊಬ್ಬಳು ತನ್ನ ಗೆಳತಿಯನ್ನು ಮದುವೆಯಾಗುವುದಕ್ಕಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡು ಯುವಕನಾಗಿ ಬದಲಾದ ಬಳಿಕ...
ಕೇರಳ: ಗೆಳತಿಯನ್ನು ಮದುವೆಯಾಗಲು ಲಿಂಗಪರಿವರ್ತನೆ ಮಾಡಿಸಿಕೊಂಡ ಯುವತಿ!
ಕೇರಳ: ಗೆಳತಿಯನ್ನು ಮದುವೆಯಾಗಲು ಲಿಂಗಪರಿವರ್ತನೆ ಮಾಡಿಸಿಕೊಂಡ ಯುವತಿ!
ತಿರುವನಂತಪುರಂ: ಯುವತಿಯೊಬ್ಬಳು ತನ್ನ ಗೆಳತಿಯನ್ನು ಮದುವೆಯಾಗುವುದಕ್ಕಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡು ಯುವಕನಾಗಿ ಬದಲಾದ ಬಳಿಕ ಆ "ಯುವಕ"ನನ್ನು ವಿವಾಹವಾಗಲು ಗೆಳತಿ ನಿರಾಕರಿಸಿ "ಕೈಕೊಟ್ಟ" ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಅರ್ಚನಾ ಎಂಬ ಯುವತಿ ತನ್ನ ಗೆಳತಿಯನ್ನು ಪ್ರೀತಿಸುತ್ತಿದ್ದು ಆಕೆಯನ್ನು ವಿವಾಹವಾಗುವ ಸಲುವಾಗಿ ತಾನು 'ಯುವಕ'ನಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾಳೆ. ಅರ್ಚನಾ ತಾನು ದೀಪು ಆಗಿ ಬದಲಾಗಿದ್ದ ಬಳಿಕ ಮತ್ತೆ ಯುವತಿಯ ಬಳಿ ಹೋಗಿ ತನ್ನನ್ನು ವಿವಾಹವಾಗಬೇಕೆಂದು ಕೇಳಿದ್ದಾಳೆ. ಆದರೆ ಆಕೆ ಅದಕ್ಕೆ ನಿರಾಕರಿಸಿದ್ದು ಈಗ ಈ ಸಂಬಂಧ ಕೇರಳ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ.
ಅರ್ಚನಾ ಖಾಸಗಿ ಎಲೆಕ್ಟ್ರಾನಿಕ್ಸ್ ಕಂಪೆನಿಯಲ್ಲಿ ಸೆಲ್ಸ್ ಡಿವಿಶನ್‍ ಕೆಲಸ ಮಾಡುತ್ತಿದ್ದಳು. ಈ ವೇಳೆ ಆಕೆಗೆ ತನ್ನ ಗೆಳತಿಯೊಡನೆ ಪ್ರೀತಿಯಾಗಿದೆ. ಗೆಳತಿಯ ಜತೆ ಸದಾ ಕಾಲ ಸಮಯ ಕಳೆಯುತ್ತಿದ್ದ ಅರ್ಚನಾಳಿಗೆ ಒಮ್ಮೆ ಆಕೆಯ ಗೆಳತಿ "ನೀನೇನಾದರೂ ಹುಡುಗನಾಗಿದ್ದರೆ ನಾನು ನಿನ್ನನ್ನೇ ವಿವಾಹವಾಗುತ್ತಿದ್ದೆ, ನಾವಿಬ್ಬರೂ ಜೀವನದುದ್ದಕ್ಕೆ ಒಟ್ಟಾಗಿ ಇರಬಹುದಿತ್ತು" ಎಂದಿದ್ದಾಳೆ.
ಈ ಮಾತಿನಿಂದ ಪ್ರೇರಣೆ ಹೊಂದಿದ ಅರ್ಚನಾ ತಾನು ಲಿಂಗಪರಿವರ್ತನೆ ಮಾಡಿಸಿಕೊಂಡು ದೀಪು ಆಗಿ ಬದಲಾಗಿದ್ದಾಳೆ. ಆ ಬಳಿಕ ಮತ್ತೆ ತನ್ನ ಗೆಳತಿಯ ಭೇಟಿಗೆ ಮುಂದಾದಾಗ ಮಾತ್ರ ಆಕೆಗೆ ಶಾಕ್ ಕಾದಿತ್ತು. ಗೆಳತಿ ದೀಪು ಆಗಿ ಬದಲಾದ ಅರ್ಚನಾಳ ಕಾಲ್ ರಿಸೀವ್ ಮಾಡದೆ ಯುವಕನ ಭೇಟಿಗೆ ನಿರಾಕರಿಸಿದ್ದಾಳೆ.
ಇದರಿಂದ ಕುಪಿತನಾದ ದೀಪು ನವೆಂಬರ್ 6 ರಂದು ಪೇರುವನ್ನಾಮುಜಿ ಪೊಲೀಸ್ ಠಾಣೆಯಲ್ಲಿ ತನ್ನ ಗೆಳತಿ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ಆದರೆ ಪೋಲೀಸರು ಆತನ ದೂರು ಸ್ವೀಕರಿಸಲಿಲ್ಲ. ನೀವು ನಿಮ್ಮ ಕುಟುಂಬದವರೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಹೇಳಿದ್ದಾರೆ. ಆದರೆ ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವ ಮುನ್ನ ತಾನು ಗೆಳತಿಯೊಡನೆ ಮಾತನಾಡಿರುವುದಾಗಿ ದೀಪು ಹೇಳಿದ್ದಾಗ ಪೋಲೀಸರು ಆ ಗೆಳತಿಯನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ಆದರೆ ನಮ್ಮ ನಡುವೆ ಅಂತಹಾ ಮಾತುಕತೆ ನಡೆದಿಲ್ಲ, ಅರ್ಚನಾ ಏಕೆ ಲಿಂಗಪರಿವರ್ತನೆ ಮಾಡಿಸಿಕೊಂಡಳು, ಅವಳ ಲಿಂಗಪರಿವರ್ತನೆ ವಿಚಾರವೇ ನನಗೆ ಗೊತ್ತಿಲ್ಲ ಎಂದು ಆಕೆ ಉತ್ತರಿಸಿದ್ದಾಳೆ. ಇದಕ್ಕೆ ಪ್ರತಿಯಾಗಿ ದೀಪು ತಾನು ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು ಗೆಳತಿಯು ತನ್ನ ಪೋಷಕರ ಒತ್ತಡದಿಂದ ಇಂತಹ ಉತ್ತರ ನೀಡಿದ್ದಾಳೆ ಎಂದು ವಾದಿಸಿದ್ದಾರೆ.
ಸದ್ಯ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ನ್ಯಾಯಾಲಯ ಯಾವ ತೀರ್ಪು ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com