ಸಿಬಿಐ ಪ್ರಧಾನ ಕಛೇರಿ
ದೇಶ
ಬೋಫೋರ್ಸ್ ಹಗರಣ: ಆರೋಪಿಗಳ ವಿರುದ್ದ ಪ್ರಕರಣ ವಜಾಗೊಳಿಸಿದ್ದ ದೆಹಲಿ ಕೋರ್ಟ್ ತೀರ್ಪು ಪ್ರಶ್ನಿಸಿದ ಸಿಬಿಐ
64 ಕೋಟಿ ರೂ. ಮೌಲ್ಯದ ಬೊಫೋರ್ಸ್ ಹರಗರಣ ಸಂಬಂಧಪಟ್ಟ ಎಲ್ಲಾ ಆರೋಪಿಗಳ ಮೇಲಿನ ಆರೋಪಗಳನ್ನು ವಜಾಗೊಳಿಸಿದ........
ನವದೆಹಲಿ: 64 ಕೋಟಿ ರೂ. ಮೌಲ್ಯದ ಬೊಫೋರ್ಸ್ ಹರಗರಣ ಸಂಬಂಧಪಟ್ಟ ಎಲ್ಲಾ ಆರೋಪಿಗಳ ಮೇಲಿನ ಆರೋಪಗಳನ್ನು ವಜಾಗೊಳಿಸಿದ 2005ರ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಿಬಿಐ ಇಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.
2005 ರ ಮೇ 31 ರಂದು, ಯೂರೋಪ್ ಮೂಲದ ಕೈಗಾರಿಕೋದ್ಯಮಿಗಳಾದ ಹಿಂದುಜಾ ಸಹೋದರರು ಸೇರಿದಂತೆ ಎಲ್ಲ ಆರೋಪಿಗಳನ್ನೂ ಈ ಪ್ರಕರಣದಿಂದ ವಜಾ ಮಾಡಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಿಬಿಐ ಈ ರ್ಜಿ ಸಲ್ಲಿಸಿದೆ.
ಹನ್ನೆರಡು ವರ್ಷಗಳ ವಿಳಂಬದ ಬಳಿಕ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದರ ಕುರಿತು ಅಟಾರ್ನಿ ಜನರಲ್ ಕೆಕೆಕ್ ವೇಣುಗೋಪಾಲ್ ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಕಾನೂನು ಾಧಿಕಾರಿಗಳ ಸಲಹೆಯ ಬಳಿಕ ಸಿಬಿಐ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ