ನವದೆಹಲಿ: ಅಕ್ರಮ ಮನೇಸರ್ ಭೂ ವ್ಯವಹಾರ ಪ್ರಕರಣ ಸಂಬಂಧ ಕೇಂದ್ರ ತನಿಖಾ ದಳ(ಸಿಬಿಐ) ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಸೇರಿದಂತೆ 35 ಮಂದಿ ವಿರುದ್ಧ ಚಾರ್ಚ್ ಶೀಟ್ ದಾಖಲಿಸಿದೆ.
ಭ್ರಷ್ಟಾಚಾರ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ಸಿಬಿಐ ಆರೋಪಿಗಳ ವಿರುದ್ಧ 'ಕ್ರಿಮಿನಲ್ ಪಿತೂರಿ ಮತ್ತು ವಂಚನೆ' ಚಾರ್ಚ್ ಶೀಟ್ ಸಲ್ಲಿಸಿದೆ. ಅಂದು ಸರ್ಕಾರವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಮಾಜಿ ಯುಪಿಎಸ್ ಸಿ ಸದಸ್ಯ ಚಟ್ಟರ್ ಸಿಂಗ್ ಹೆಸರನ್ನು ಸಿಬಿಐ ಹೆಸರಿಸಿದೆ.
ಸಿಬಿಐ ಚಾರ್ಚ್ ಶೀಟ್ ನಲ್ಲಿ 400 ಎಕರೆ ಅಕ್ರಮ ಭೂ ವ್ಯವಹಾರ ನಡೆಸಿದೆ. ಮನೇಸರ್ ಭೂ ವ್ಯವಹಾರ ಒಪ್ಪಂದ ನಡೆದಾಗ ಅಂದು ಒಂದು ಎಕರೆ 4 ಕೋಟಿ ರುಪಾಯಿ ಮಾರುಕಟ್ಟೆ ಮೌಲ್ಯವಿತ್ತು. ಆದರೆ ಖಾಸಗಿ ಬಿಲ್ಡರ್ ಗಳು ಬರೀ 100 ಕೋಟಿ ರುಪಾಯಿಗೆ 400 ಎಕರೆಯನ್ನು ಖರೀದಿಸಿದ್ದರು ಎಂದು ತಿಳಿಸಿದೆ.
ಗುರ್ಗಾಂವ್ ನಲ್ಲಿ ಮನೇಸರ್, ನೌರಂಗ್ ಪುರ್ ಮತ್ತು ಲಖ್ನೌಲ್ಲಾದಲ್ಲಿನ ಭೂ ವ್ಯವಹಾರ ಒಪ್ಪಂದಿದಾಗಿ ಸರ್ಕಾರಕ್ಕೆ ಒಟ್ಟಾರೆ 1500 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಹೇಳಿದೆ.
2015ರ ಸೆಪ್ಟೆಂಬರ್ ನಲ್ಲಿ ಸಿಬಿಐ ಮನೇಸರ್ ಭೂ ವ್ಯವಹಾರ ಒಪ್ಪಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು.