ಮದ್ರಾಸ್ ಹೈಕೋರ್ಟ್ ನಲ್ಲಿ 'ತಮಿಳು' ಅಧಿಕೃತ ಭಾಷೆಯಾಗಿಸುವ ಪ್ರಸ್ತಾವನೆಗೆ ಸುಪ್ರೀಂ ನಕಾರ

ತಮಿಳುನಾಡು ರಾಜ್ಯದ ಪ್ರಾದೇಶಿಕ ಭಾಷೆ ತಮಿಳು ಭಾಷೆಯಲನ್ನು ಮದ್ರಾಸ್ ಹೈಕೋರ್ಟ್ ನಲ್ಲಿ ಅಧಿಕೃತ ಭಾಷೆ ಮಾಡಬೇಕೆಂಬ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
ಚೆನ್ನೈ: ತಮಿಳುನಾಡು ರಾಜ್ಯದ ಪ್ರಾದೇಶಿಕ ಭಾಷೆ ತಮಿಳು ಭಾಷೆಯಲನ್ನು ಮದ್ರಾಸ್ ಹೈಕೋರ್ಟ್ ನಲ್ಲಿ ಅಧಿಕೃತ ಭಾಷೆ ಮಾಡಬೇಕೆಂಬ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. 
ಮದ್ರಾಸ್ ಹೈಕೋರ್ಟ್ ನಲ್ಲಿ ತಮಿಳು ಭಾಷೆಯನ್ನು ಅಧಿಕೃತ ಭಾಷೆಯೆಂದು ಘೋಷಣೆ ಮಾಡುವ ಕುರಿತು ಸಂಸದೆ ಶಶಿಕಲಾ ಪುಷ್ಪಾ ಅವರು ಕೇಳಿದ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರಿಸಿರುವ ಕಾನೂನು ಖಾತೆ ರಾಜ್ಯ ಸಚಿವ ಪಿ.ಪಿ.ಚೌಧರಿಯವರು, ತಮಿಳನಾಡು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಲಹೆಗಾಗಿ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾಗಿತ್ತು. ಸುದೀರ್ಘ ಮಾತುಕತೆ ಬಳಿ ನ್ಯಾಯಾಧೀಶರು ಪ್ರಸ್ತಾವನೆ ನಿರಾಕರಿಸಿದರು ಎಂದು ಹೇಳಿದ್ದಾರೆ. 
ತಮಿಳು ಭಾಷೆಯನ್ನು ಮದ್ರಾಸ್ ಹೈಕೋರ್ಟ್'ನ ಅಧಿಕೃತ ಭಾಷೆಯಾಗಿ ಮಾಡುವಂತೆ ಒತ್ತಾಯಿಸಿ ಇತ್ತೀಚೆಗಷ್ಟೇ ತಮಿನಾಡು ವಿಧಾನಸಭೆಯು ಸರ್ವಾನುಮತದಿಂದ ಅಂಗೀಕಾರ ಪಡೆದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com