ಹೈದರಾಬಾದ್ ಪೋಲೀಸ್ ಕಾರ್ಯಾಚರಣೆ: 3 ಕೋಟಿ ರೂ. ಮೌಲ್ಯದ ಮೂರು ಪಂಚಲೋಹ ವಿಗ್ರಹ ವಶ, ಇಬ್ಬರ ಬಂಧನ

ಐತಿಹಾಸಿಕ ಮಹತ್ವವುಳ್ಳ ಮೂರು ಕೋಟಿ ರೂ. ಮೌಲ್ಯದ 3 ಪಂಚಲೋಹದ ವಿಗ್ರಹಗಳನ್ನು ಕದ್ದಿದ್ದ ಇಬ್ಬರು ಆರೋಪಿಗಳನ್ನು ಹೈದರಾಬಾದ್ ಪೋಲೀಸರು ಬಂಧಿಸಿದ್ದಾರೆ.
ಪೋಲೀಸ್ ಕಾರ್ಯಾಚರಣೆ:  3 ಕೋಟಿ ರೂ. ಮೌಲ್ಯದ ಮೂರು ಪಂಚಲೋಹ
ಪೋಲೀಸ್ ಕಾರ್ಯಾಚರಣೆ: 3 ಕೋಟಿ ರೂ. ಮೌಲ್ಯದ ಮೂರು ಪಂಚಲೋಹ
ಹೈದರಾಬಾದ್: ಐತಿಹಾಸಿಕ ಮಹತ್ವವುಳ್ಳ ಮೂರು ಕೋಟಿ ರೂ. ಮೌಲ್ಯದ 3 ಪಂಚಲೋಹದ ವಿಗ್ರಹಗಳನ್ನು ಕದ್ದಿದ್ದ ಇಬ್ಬರು ಆರೋಪಿಗಳನ್ನು ಹೈದರಾಬಾದ್ ಪೋಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಅವರು ಕಳವು ಮಾಡಿದ್ದ ಮೂರೂ ವಿಗ್ರಹಗಳನ್ನು ವಶಕ್ಕೆ ಪಡೆದಿದ್ದಾರೆ.
ತೆಲಂಗಾಣದ ಕಾಮರೆಡ್ಡಿ ಪಟ್ಟಣದಲ್ಲಿನ ದೇವಾಲಯದಿಂದ ಜ.27ರಂದು  ದುಷ್ಕರ್ಮಿಗಳು ಈ ವಿಗ್ರಹಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಹೈದರಾಬಾದ್ ಮತ್ತು ಕಾಮರೆಡ್ಡಿ ಪೋಲೀಸರು ಜಂಟಿಯಾಗಿ ಕಾರ್ಯಾಚರಣೆಗಿಳಿದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೋಲೀಸರು ವಶಕ್ಕೆ ಪಡೆದಿರುವ ಈ ಪಂಚಲೋಹ ವಿಗ್ರಹಗಳು 600 ವರ್ಷಗಳಷ್ಟು ಪುರಾತನವಾದದ್ದು ಎಂದು ಕಂಡುಬಂದಿದ್ದು ಬಂಧಿತರು ಈ ಹಿಂದೆ ಸಹ ದೇವಾಲಯಗಳಿಂದ ವಿಗ್ರಹ ಕಳವು ಮಾಡಿದ ಹಲವು ಪ್ರಕರಣಗಗಳಲ್ಲಿ ಭಾಗಿಯಾಗಿದ್ದರು ಎಂದು ಹೈದರಾಬಾದ್ ಪೊಲೀಸ್‌ ಕಮಿಷನರ್‌ ವಿ.ವಿ. ಶ್ರೀನಿವಾಸ ರಾವ್ ಹೇಳಿದರು.
ಕಳವು ಮಾಡಿದ ನಂತರ ವಿಗ್ರಹ ಚೋರರು ಕರ್ನಾಟಕಕ್ಕೆ ಆಗಮಿಸುತ್ತಿದ್ದು ಕೆಲ ದಿನಗಳ ಬಳಿಕ ಮತ್ತೆ ಹೈದರಾಬಾದ್ ಗೆ ವಾಪಾಸಾಗಿ ವಿಗ್ರಹ ಮಾರಾಟ ನಡೆಸುತ್ತಿತ್ತು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com