ಪಾಕಿಸ್ತಾನಕ್ಕೆ ಸಿಪಿಇಸಿ ಮೇಲೆ ಭಾರತ ದಾಳಿಯ ಭಯ!

ಚೀನಾ-ಪಾಕಿಸ್ತಾನದ ಮಹತ್ವಾಕಾಂಕ್ಷಿ ಯೋಜನೆಯಾದ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯ ಸ್ಥಾಪನೆಗಳ ಮೇಲೆ ಭಾರತ ದಾಳಿ ಮಾಡಬಹುದೆಂದು ಪಾಕಿಸ್ತಾನಕ್ಕೆ ಭಯ ಉಂಟಾಗಲು
ಸಿಪಿಇಸಿ
ಸಿಪಿಇಸಿ
ಇಸ್ಲಾಮಾಬಾದ್: ಚೀನಾ-ಪಾಕಿಸ್ತಾನದ ಮಹತ್ವಾಕಾಂಕ್ಷಿ ಯೋಜನೆಯಾದ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯ ಸ್ಥಾಪನೆಗಳ ಮೇಲೆ ಭಾರತ ದಾಳಿ ಮಾಡಬಹುದೆಂದು ಪಾಕಿಸ್ತಾನಕ್ಕೆ ಭಯ ಉಂಟಾಗಲು ಪ್ರಾರಂಭವಾಗಿದೆ ಎಂದು ಅಲ್ಲಿನ ಪತ್ರಿಕೆ ಡಾನ್ ಬರೆದಿದೆ.
ಭಾರತದಿಂದ ದಾಳಿ ನಡೆಯಬಹುದಾದ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಿಪಿಇಸಿ ಯೋಜನೆಗಳಿರುವ ಪ್ರದೇಶಗಳಲ್ಲಿ ಪಾಕಿಸ್ತಾನ ಭದ್ರತೆಯನ್ನು ಹೆಚ್ಚಿಸಿದೆ ಎಂದು ಡಾನ್ ಪತ್ರಿಕೆ ವರದಿ ಪ್ರಕಟಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯ ಉನ್ನತ ಅಧಿಕಾರಿಗಳ ಹೇಳಿಕೆಯನ್ನೂ ಉಲ್ಲೇಖಿಸಿದೆ. 
"ಭಾರತ ಈಗಾಗಲೇ 400 ಮುಸ್ಲಿಂ ಯುವಕರ ತಂಡವನ್ನು ಅಫ್ಘಾನಿಸ್ತಾನಕ್ಕೆ ಕಳಿಸಿ ತರಬೇತಿ ಕೊಡಿಸುತ್ತಿದ್ದು ಈ ಯುವಕರು ಸಿಪಿಇಸಿ ಸ್ಥಾಪನೆಗಳ ಮೇಲೆ ದಾಳಿ ನಡೆಸಲಿದ್ದಾರೆ, ಭಾರತದ ಟಾರ್ಗೆಟ್ ನಲ್ಲಿ ಕರಕೋರಮ್ ಹೆದ್ದಾರಿಯೂ ಸೇರಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವಾಲಯ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com