'ಪತಿಯಿಂದ ನನ್ನನ್ನು ರಕ್ಷಿಸಿ'; ವೈರಲ್ ಆಯ್ತು ಮುಂಬೈ ಮಹಿಳೆಯ ಟ್ವಿಟರ್ ವಿಡಿಯೋ

ನನ್ನ ಪತಿಯಿಂದ ನನ್ನನ್ನು ರಕ್ಷಿಸಿ ಎಂದು ಮುಂಬೈ ಮೂಲದ ಮಹಿಳೆಯೊಬ್ಬರು ಅಪ್ಲೋಡ್ ಮಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಹಿಳೆಯ ಅಳಲು (ಟ್ವಿಟರ್ ಚಿತ್ರ)
ಮಹಿಳೆಯ ಅಳಲು (ಟ್ವಿಟರ್ ಚಿತ್ರ)
ಮುಂಬೈ: ನನ್ನ ಪತಿಯಿಂದ ನನ್ನನ್ನು ರಕ್ಷಿಸಿ ಎಂದು ಮುಂಬೈ ಮೂಲದ ಮಹಿಳೆಯೊಬ್ಬರು ಅಪ್ಲೋಡ್ ಮಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಖ್ಯಾತ ಸಿನಿಮಾ ನಿರ್ದೇಶಕ ಹಾಗೂ ಸಾಮಾಜಿಕ ಕಾರ್ಯಕರ್ತ ಅಶೋಕೆ ಪಂಡಿತ್​ ಅವರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಆಕೆಯ ನೆರವಿಗಾಗಿ ಮನವಿ ಮಾಡಿದ್ದಾರೆ. ಮುಂಬೈನ ಖಾರ್ ರಸ್ತೆ  ನಿವಾಸಿಯಾಗಿರುವ ಮಹಿಳೆ ಈ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದು, ಆಟೋಮೋಬೈಲ್​ ಉದ್ಯಮಿಯಾಗಿರುವ ಗಂಡನ ಕಿರುಕುಳದ ವಿರುದ್ಧ ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾರೆ.
ತಮ್ಮ ಪತಿ ನಿತ್ಯವೂ ತಮಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದು, ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ. ನನ್ನ ಮಕ್ಕಳಿಗಾಗಿ ಅನೇಕ ವರ್ಷಗಳಿಂದ ಇದನ್ನು ಸಹಿಸಿಕೊಂಡಿದ್ದೇವೆ. ಆದರೆ ಮಕ್ಕಳನ್ನೂ ಕೂಡ ಅವರ  ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆವರ ಮೂಲಭೂತ ಖರ್ಚುಗಳಿಗಾಗಿಯೂ ಹಣ ನೀಡದೇ ನಮ್ಮನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ. ಪತಿಯ ವಿರುದ್ಧ ಎಫ್​ಐಆರ್ ದಾಖಲಾಗಿದ್ರು ಕೂಡ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.  ಹೀಗಾಗಿ ನನಗೆ ದಿಕ್ಕೇ ದೋಚದಂತಾಗಿದೆ. ನನಗೆ ನ್ಯಾಯ ಸಿಗದಿದ್ದ ಪಕ್ಷದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಪತಿಯ ವಿರುದ್ಧ ಎಫ್​ ಐಆರ್ ದಾಖಲಾಗಿದ್ದರೂ ಕೂಡ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನನಗೆ  ದಿಕ್ಕೇ ದೋಚದಂತಾಗಿದೆ. ನನಗೆ ನ್ಯಾಯ ಸಿಗದಿದ್ದ ಪಕ್ಷದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಸಾವೊಂದೇ ನನ್ನ ಮುಂದಿರುವ ಕೊನೆ ಆಯ್ಕೆಯಾಗಿದೆ. ನನಗೆ ನ್ಯಾಯ ಮತ್ತು ಸಹಾಯದ ಅವಶ್ಯಕತೆ ಇದೆ ಎಂದು ಮಹಿಳೆ  ಅಂಗಲಾಚಿದ್ದಾಳೆ.
ಇನ್ನು ಮಹಿಳೆಯ ವಿಡಿಯೋ ಸಂಬಂಧ ಪ್ರತಿಕ್ರಿಯೆ ನೀಡಿರುವ ಖಾರ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು, ವಿಡಿಯೋ ಆಧಾರದ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ  ಪತಿ ಉದ್ಯಮಿ ವಿರುದ್ಧ 2 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಮಹಿಳೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com