ಕೇರಳ: ಕವಿಯ ಮೇಲೆ ಹಲ್ಲೆ ಪ್ರಕರಣ, ಆರು ಆರ್ ಎಸ್ ಎಸ್ ಕಾರ್ಯಕರ್ತರ ಬಂಧನ

ಮಲಯಾಳಂ ಕವಿ ಕುರೀಪುಳ ಶ್ರೀಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಆರು ಆರ್ ಎಸ್ ಎಸ್ ಕಾರ್ಯಕರ್ತರನ್ನು ಕೇರಳದ ಕೊಲ್ಲಮ್ ನಲ್ಲಿ ಬಂಧಿಸಲಾಗಿದೆ.
ಕುರೀಪುಳ ಶ್ರೀಕುಮಾರ್
ಕುರೀಪುಳ ಶ್ರೀಕುಮಾರ್
ಕೊಲ್ಲಮ್: ಮಲಯಾಳಂ ಕವಿ ಕುರೀಪುಳ ಶ್ರೀಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಆರು ಆರ್ ಎಸ್ ಎಸ್ ಕಾರ್ಯಕರ್ತರನ್ನು ಕೇರಳದ ಕೊಲ್ಲಮ್ ನಲ್ಲಿ ಬಂಧಿಸಲಾಗಿದೆ.
ಸಂಘದ ಕಾರ್ಯಕರ್ತರಿಂದ  ಶ್ರೀಕುಮಾರ್ ನಿನ್ನೆ ತಡರಾತ್ರಿ ಹಲ್ಲೆಗೊಳಗಾಗಿದ್ದರು. ಅವರು ಕೊಚ್ಚಿ ಸಮೀಪ ವಡಾಯಂಬಾಡಿ ಜನರು ನಡೆಸುತ್ತಿರುವ ಹೋರಾಟದಲ್ಲಿ ಭಾಗವಹಿಸಿ ಮರಳುವ ಮೇಳೆ ಈ ಹಲ್ಲೆ ನಡೆದಿದೆ. ಶ್ರೀಕುಮಾರ್ ತಮ್ಮ ಭಾಷಣದುದ್ದಕ್ಕೂ ಹಿಂದುತ್ವವನ್ನು ಕಟು ಮಾತುಗಳಲ್ಲಿ ಟೀಕಿಸಿದ್ದರು.
ತಾನು ಗುಂಪೊಂದರಿಂದ ಹಲ್ಲೆಗೊಳಗಾದುದನ್ನು ಶ್ರೀಕುಮಾರ್ ಖಚಿತಪಡಿಸಿದ್ದು ಕೆಲ ಸ್ಥಳೀಯ ಜನರು ಕವಿ ಶ್ರೀಕುಮಾರ್ ಅವರನ್ನು ಹಲ್ಲೆಕೋರರಿಂದ ತಪ್ಪಿಸಿಕೊಳ್ಳಲು ಸಹಕರಿಸಿದ ನಂತರ ಅವರು ಕಾರನ್ನೇರಿ ಪ್ರಯಾಣ ಮುಂದುವರಿಸಿದ್ದರು.  ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ 'ಫಾಸಿಸ್ಟ್ ದಾಳಿ'ಯನ್ನು ಖಂಡಿಸಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೋಲೀಸರಿಗೆ ಆದೇಶಿಸಿದ್ದಾರೆ.
ಘಟನೆ ಸಂಬಂಧ ಒಟ್ಟಾರೆ ಹದಿನೈದು ಮಂದಿಯ ವಿರುದ್ಧ ಪ್ರಕರಣ ದಾಕಲಾಗಿದ್ದು ಅದರಲ್ಲಿ ಆರು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದು ಕೋಮುವಾದಿಗಳಿಂದಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಮಾಜಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ವಿ.ಎಂ. ಸುಧೀರನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com