ಕಾಶ್ಮೀರದಲ್ಲಿ ಮತ್ತೆ ಉಗ್ರ ದಾಳಿ, ಇಬ್ಬರು ಯೋಧರು ಸೇರಿ 4 ಸಾವು, ಆರು ಮಂದಿಗೆ ಗಾಯ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಯೋಧರನ್ನು ಗುರಿಯಾಗಿಸಿಕೊಂಡು ನಡೆಸಿರುವ ದಾಳಿಯಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರು ಸೇರಿ 4 ಮಂದಿ ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿದ್ದಾರೆ.
ಸುಂಜವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ
ಸುಂಜವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ
ಜಮ್ಮು: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಯೋಧರನ್ನು ಗುರಿಯಾಗಿಸಿಕೊಂಡು ನಡೆಸಿರುವ ದಾಳಿಯಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರು ಸೇರಿ 4 ಮಂದಿ ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿದ್ದಾರೆ.
ಜಮ್ಮು ನಗರದ ಹೊರವಲಯದಲ್ಲಿರುವ ಚೆನ್ನಿ ಪ್ರಾಂತ್ಯದಲ್ಲಿರುವ ಸುಂಜವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಈ ವೇಳೆ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದು, ಒಟ್ಟು ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಅಂತೆಯೇ 6 ಮಂದಿಗೆ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು  ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸೈನಿಕರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಸೇನಾಧಿಕಾರಿಗಳು ತಿಳಿಸಿರುವಂತೆ ಇಂದು ಮುಂಜಾನೆ 4.55ರ ಸುಮಾರಿನಲ್ಲಿ ಉಗ್ರರು ಕ್ಯಾಂಪ್ ನೊಳಗೆ ನುಸುಳಿದ್ದು, ಅನುಮಾನಗೊಂಡ ಸೈನಿಕರು ಶೋಧ ನಡೆಸಿದ್ದಾರೆ. ಈ ವೇಳೆ ಉಗ್ರರು ದಾಳಿ ನಡೆಸಿದ್ದು, ಕ್ಯಾಂಪ್  ಅವರಣದಲ್ಲಿದ್ದ ಬಂಕರ್ ಗೆ ಬೆಂಕಿ ಹಾಕಿದ್ದು, ಕ್ಯಾಂಪ್ ನ ಆವರಣದಲ್ಲಿರುವ ಸೇನಾ ಕ್ವಾರ್ಟರ್ಸ್ ನೊಳಗೆ ನುಸುಳಿರುವ ಉಗ್ರರು ಅವಿತುಕೊಂಡಿರುವ ಸಾಧ್ಯತೆ ಇದೆ. 
ಕೂಡಲೇ ಸೇನೆ ಉಗ್ರ ನಿಗ್ರಹ ಕಾರ್ಯಾಚರಣೆ ಆರಂಭಿಸಿದ್ದು, ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದೆ. ಅಂತೆಯೇ ಕಾರ್ಯಾಚರಣೆಗೆ ಸೇನೆ ಒಂದು ಹೆಲಿಕಾಪ್ಟರ್, ಒಂದು ಡ್ರೋಣ್ ವಿಮಾನವನ್ನೂ ಕೂಡ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಜೈಷ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದ ಉಗ್ರರು ದಾಳಿ ನಡೆಸಿರುವ ಶಂಕೆ ಇದ್ದು, ಸಂಸತ್ ಭವನ ಮೇಲಿನಿ ದಾಳಿಕೋರ ಅಪ್ಜಲ್ ಗುರು ಗಲ್ಲು ಶಿಕ್ಷೆ ವರ್ಷಾಚರಣೆ ಬ್ನೆನಲ್ಲೇ ಈ ಉಗ್ರರು ಈ ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com