ಬಾಬ್ರಿ ಮಸೀದಿ, ತ್ರಿವಳಿ ತಲಾಖ್ ವಿಚಾರಗಳಲ್ಲಿ ರಾಜಿಯಾಗುವುದಿಲ್ಲ; ಓವೈಸಿ

ಬಾಬ್ರಿ ಮಸೀದಿ ಮತ್ತು ತ್ರಿವಳಿ ತಲಾಖ್ ವಿಚಾರಗಳಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರು ಭಾನುವಾರ ಹೇಳಿದ್ದಾರೆ...
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಹೈದರಾಬಾದ್; ಬಾಬ್ರಿ ಮಸೀದಿ ಮತ್ತು ತ್ರಿವಳಿ ತಲಾಖ್ ವಿಚಾರಗಳಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರು ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತ್ರಿವಳಿ ತಲಾಖ್ ಹಾಗೂ ಬಾಬ್ರಿ ಮಸೀದಿ ವಿಚಾರಗಳಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಹೇಳಿದ್ದು, ಈ ಮೂಲಕ ತನ್ನ ಮುಂಚಿತ ನಿಲುವನ್ನೇ ಪ್ರತಿಪಾದಿಸಿದೆ. ಒಂದು ಬಾರಿ ಒಂದು ಸ್ಥಳದಲ್ಲಿ ಮಸೀದಿ ನಿರ್ಮಾಣ ಮಾಡಿದ ಬಳಿಕ, ಅದು ಶಾಶ್ವತವಾಗಿ ಅಲ್ಲಿಯೇ ಉಳಿಯುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ವಿಚಾರದಲ್ಲಿ ಯಾರು ರಾಜಿ ಮಾಡಿಕೊಳ್ಳುತ್ತಾರೋ ಅವರು ಸರ್ವಶಕ್ತ ಅಲ್ಲಾಗೆ ಉತ್ತರ ನೀಡಬೇಕು ಎಂದು ಹೇಳಿದ್ದಾರೆ. 
ಬಳಿಕ ತ್ರಿವಳಿ ತಲಾಖ್ ಬಗ್ಗೆ ಮಾತನಾಡಿರುವ ಅವರು, ತ್ರಿವಳಿ ತಲಾಖ್ ಕುರಿತ ಸರ್ಕಾರದ ನಿರ್ಧಾರವನ್ನು ಮುಸ್ಲಿಂ ಸಮುದಾಯ ಒಪ್ಪುವುದಿಲ್ಲ. ಏಕೆಂದರೆ, ಅಲ್ಪಸಂಖ್ಯಾತರಿಗೆ ನೀಡಲಾಗುವ ಸಂವಿಧಾನದ ನಿಂಬಧನೆಗಳಿಗೆ ಇದು ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com