ಅಮೆರಿಕಾ ಕ್ಷಿಪಣಿ ಬಳಕೆ ಮಾಡಿ ಪಾಕಿಸ್ತಾನದಿಂದ ಭಾರತೀಯ ಸೈನಿಕರ ಮೇಲೆ ದಾಳಿ!

ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಭಾರತೀಯ ಸೇನೆ ಮೇಲೆ ದಾಳಿ ಮಾಡಲು ಪಾಕಿಸ್ತಾನ ಅಮೆರಿಕಾದ ಕ್ಷಿಪಣಿಗಳನ್ನು ಬಳಕೆ ಮಾಡುತ್ತಿದೆ ಎಂಬಂತಹ ಮಾಹಿತಿ ರಕ್ಷಣಾ ಸಚಿವಾಲಯಕ್ಕೆ ತಿಳಿದುಬಂದಿದೆ.
ಅಂತಾರಾಷ್ಟ್ರೀಯ ಗಡಿರೇಖೆ ಬಳಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ನಿಯೋಜಿಸಿರುವ ಸೇನಾ ಸಿಬ್ಬಂದಿ ಚಿತ್ರ
ಅಂತಾರಾಷ್ಟ್ರೀಯ ಗಡಿರೇಖೆ ಬಳಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ನಿಯೋಜಿಸಿರುವ ಸೇನಾ ಸಿಬ್ಬಂದಿ ಚಿತ್ರ

ಜಮ್ಮು -ಕಾಶ್ಮೀರ: ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಭಾರತೀಯ ಸೇನೆ ಮೇಲೆ ದಾಳಿ ಮಾಡಲು ಪಾಕಿಸ್ತಾನ ಅಮೆರಿಕಾದ ಕ್ಷಿಪಣಿಗಳನ್ನು ಬಳಕೆ ಮಾಡುತ್ತಿದೆ ಎಂಬಂತಹ ಮಾಹಿತಿ ರಕ್ಷಣಾ ಸಚಿವಾಲಯಕ್ಕೆ ತಿಳಿದುಬಂದಿದೆ.

ರಜೌರಿ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಕಳೆದ ವಾರ ಭಾರತೀಯ ಸೈನಿಕರ ಮೇಲೆ ಉಗ್ರರು ನಡೆಸಿದ ಶೆಲ್ ದಾಳಿ ವೇಳೆ ಅಮೆರಿಕಾ ತಯಾರಿಸಿದ  ಕ್ಷಿಪಣಿ ನಿರ್ದೇಶಿತ ವಿರೋಧಿ ಟ್ಯಾಂಕ್  ಬಳಸಿರುವುದು ಕಂಡುಬಂದಿದೆ.

ಪಾಕಿಸ್ತಾನ 120 ಎಂಎಂ ಹಾಗೂ ಕ್ಷಿಪಣಿ ನಿರ್ದೇಶಿತ ವಿರೋಧಿ ಟ್ಯಾಂಕ್ ಬಳಕೆ ಮಾಡಿದೆ ಎಂದು ರಕ್ಷಣಾ ಮೂಲಗಳು ಸ್ಪಷ್ಪಪಡಿಸಿವೆ. ಈ ಸಂಬಂಧ ಅಮೆರಿಕಾದೊಂದಿಗೆ ಮಾತುಕತೆ ನಡೆಸುವುದಾಗಿಯೂ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕಾ ಭಾರತದ ದೊಡ್ಡ ರಕ್ಷಣಾ ಪಾಲುದಾರರಾಗಿದ್ದು, ರಕ್ಷಣೆ ಮತ್ತು ಭದ್ರತೆ ಸಂಬಂಧ ಉಭಯ ದೇಶಗಳ ನಡುವೆ ಹಲವು ಒಪ್ಪಂದಗಳು ಏರ್ಪಟ್ಟಿವೆ. ಕಳೆದ ವಾರ ನಡೆದ ದಾಳಿಯಲ್ಲಿ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭಾರತ ಸ್ಪಷ್ಪಪಡಿಸಿದೆ.

 ಜಮ್ಮು- ಕಾಶ್ಮೀರದ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ  ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಪಾಕಿಸ್ತಾನ ತನ್ನ ಸೇನೆಯನ್ನು ನಿಯೋಜಿಸಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com