ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮಾತನಾಡಿ, ಇಡೀ ವಿಶ್ವದ ನಾಗರೀಕತೆ ಇಂದು ಉಗ್ರರೊಂದಿಗೆ ಸಂಘರ್ಷಕ್ಕೆ ಇಳಿದಿದೆ. ಉಗ್ರರೊಂದಿಗೆ ಹೋರಾಟ ನಡೆಸುವ ವೇಳೆ ಇಂತಹ ದುರಾದೃಷ್ಟಕರ ಘಟನೆಗಳನ್ನು ನಾವು ಎದುರಿಸಬೇಕಾಗುತ್ತದೆ. ಏನೇ ಆದರೂ, ಜಮ್ಮು ಮತ್ತು ಕಾಶ್ಮೀರಕ್ಕಾಗಿ ಹಾಗೂ ಉಗ್ರರ ವಿರುದ್ದ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆಂದು ತಿಳಿಸಿದ್ದಾರೆ.