ಕುಲ್ದೀಪ್ ದೀಕ್ಷಿತ್, ಮೃತ ಸೈನಿಕನಾಗಿದ್ದು ತನ್ನ ಸ್ನೇಹಿತ, ಶಿವ ಪ್ರಕಾಶ್ ವಿವಾಹದಲ್ಲಿ ಭಾಗವಹಿಸಿದ್ದ ವೇಳೆ ಸಂಭ್ರಮಾಚರಣೆ ಅಂಗವಾಗಿ ನಡೆದ ಫೈರಿಂಗ್ ವೇಳೆ ತನ್ನ ಪರವಾನಗಿ ಹೊಂದಿದ್ದ ಪಿಸ್ತೂಲಿನಿಂದ ಹಾರಿದ್ದ ಗುಂಡು ತಗುಲಿ ಮೃತಪಟ್ಟಿದ್ದಾನೆ. ಅತಿಥಿಗಳು ಸಂಭ್ರಮದ ನೃತ್ಯವಾಡುತ್ತಿದ್ದಾಗ ಮೃತನ ಇನ್ನೊಬ್ಬ ಸ್ನೇಹಿತ, ಸಂಜಯ್ ಮೌರ್ಯ ಗಾಳಿಯಲ್ಲಿ ಅನೇಕ ಸುತ್ತು ಗುಂಡು ಹಾರಿಸಿದ್ದನು. ಅದರಲ್ಲಿ ಒಂದು ಗುಂಡು ಆಕಸ್ಮಿಕವಾಗಿ ದೀಕ್ಷಿತ್ ಹೊಟ್ಟೆಯನ್ನು ಹೊಕ್ಕಿತ್ತು ಎಂದು ಪೋಲೀಸ್ ಅಧೀಕ್ಷಕ (ಪೂರ್ವ) ಅನುರಾಗ್ ಆರ್ಯ ಹೇಳಿದ್ದಾರೆ.