ಹುತಾತ್ಮ ಸೈನಿಕನ ಪತ್ನಿ ಕಾಶ್ಮೀರ ಸೇನಾ ತರಬೇತಿ ಅಕಾಡೆಮಿಗೆ ಸೇರ್ಪಡೆ

ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಡುತ್ತಾ ಹುತಾತ್ಮನಾಗಿದ್ದ ಭಾರತೀಯ ಯೋಧ ಶಿಶಿರ ಮಲ್‌ ಅವರ ಪತ್ನಿ ಸಂಗೀತಾ ಕಾಶ್ಮೀರದ ಸೇನಾಧಿಕಾರಿಗಳ ತರಬೇತಿ ಅಕಾಡೆಮಿಗೆ ಸೇರಿದ್ದಾರೆ.
ಹುತಾತ್ಮ ಸೈನಿಕನ ಪತ್ನಿ ಕಾಶ್ಮೀರ ಸೇನಾ ತರಬೇತಿ ಅಕಾಡಮಿ ಸೇರ್ಪಡೆ
ಹುತಾತ್ಮ ಸೈನಿಕನ ಪತ್ನಿ ಕಾಶ್ಮೀರ ಸೇನಾ ತರಬೇತಿ ಅಕಾಡಮಿ ಸೇರ್ಪಡೆ
ನವದೆಹಲಿ: ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಡುತ್ತಾ ಹುತಾತ್ಮನಾಗಿದ್ದ ಭಾರತೀಯ ಯೋಧ ಶಿಶಿರ ಮಲ್‌ ಅವರ ಪತ್ನಿ ಸಂಗೀತಾ ಕಾಶ್ಮೀರದ ಸೇನಾಧಿಕಾರಿಗಳ ತರಬೇತಿ ಅಕಾಡೆಮಿಗೆ ಸೇರಿದ್ದಾರೆ.
ಪತಿ ಸಾವಿನ ಬಳಿಕ ಖಿನ್ನತೆಗೊಳಗಾಗಿದ್ದ ಸಂಗೀತಾ ಬಳಿಕ ಸುಧಾರಿಸಿಕೊಂಡಿದ್ದರು. ಇಷ್ಟೇ ಅಲ್ಲದೆ ಬ್ಯಾಂಕ್ ಪರೀಕ್ಷೆ ಕಟ್ಟಿ ತೇರ್ಗಡೆಯಾಗಿದ್ದರು. ಡೆಹರಾಡೂನ್ ನಲ್ಲಿ ವಾಸ್ತವ್ಯವಿದ್ದ ಸಂಗೀತಾಗೆ ಒಂದು ದಿನ ರಾಣಿಖೇತ್ ಸೆಂಟ್ರಲ್‌ ಕಮಾಂಡ್‌ ನ ಒಂದು ಕಾರ್ಯಕ್ರಮಕ್ಕೆ ಆಗಮಿಸುವಂತೆ ಸೇನೆಯಿಂದ ದೂರವಾಣಿ ಕರೆಯೊಂದು ಬಂದಿತ್ತು. ಕರೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ತೆರಳಿದ ಸಂಗೀತಾ ಅವರಿಗೆ ಅವಧುತಾತ್ಮ ಪತಿ ಮೆಲ್ ಆವರ ಸಹೋದ್ಯೋಗಿಗಳು ಹಾಗೂ ಸ್ನೇಹಿತರು ಸೇನಾಪಡೆಗೆ ಸೇರಿಕೊಳ್ಳುವಂತೆ ಮನವೊಲಿಸಿದ್ದಾರೆ. ಇದರಿಂದ ಪ್ರೇರಿತರಾಗಿ ಸಂಗೀತಾ ಕಾಶ್ಮೀರದ ಸೇನಾಧಿಕಾರಿಗಳ ತರಬೇತಿ ಅಕಾಡೆಮಿಯನ್ನು ಸೇರಿದರು.
ಇದಕ್ಕೂ ಮುನ್ನ ಸಂಗೀತಾ ದೆಹಲಿಯ ವೀರ ನಾರಿ ಸಮಿತಿಯನ್ನು ಸಂಪರ್ಕಿಸಿದ್ದರು. ಓಟಿಎ ಎಂಟ್ರೆನ್ಸ್‌ ಪರೀಕ್ಷೆಗೆ ಪೂರ್ವತಯಾರಿ ಹಾಗೂ ತರಬೇತಿಯನ್ನು ಪಡೆದ ಸಂಗೀತಾ ಪತಿಯ ನಿಧನದ ಮೂರು ವರ್ಷದ ಬಳಿಕ ಶಾರ್ಟ್‌ ಸರ್ವಿಸ್‌ ಕಮಿಷನ್‌ (ಎಸ್‌ಎಸ್‌ಸಿ) ಪರೀಕ್ಷೆ ಪಾಸ್ ಮಾಡಿದ್ದಾರೆ. ಅದಾಗಿ ಚೆನ್ನೈನಲ್ಲಿನ ಆಫೀಸರ್  ಟ್ರೈನಿಂಗ್‌ ಅಕಾಡೆಮಿಗೆ ಆಯ್ಕೆಯಾಗಿದ್ದಾರೆ.
ತರಬೇತಿ ಮುಗಿದ ಬಳಿಕ ಯೋಧನ ಪತ್ನಿ ಸಂಗೀತಾ ಸೇನೆಯಲ್ಲಿ ಲೆಫ್ಟಿನೆಂಟ್‌ ಆಗಿ ಸೇವೆ ಸಲ್ಲಿಸಲಿದ್ದಾರೆ.
ಸಂಗೀತಾ ಅವರ ಪತಿ ಶಿಶಿರ್‌ ಮಲ್‌ ಭಾರತೀಯ ಸೇನೆಯಲ್ಲಿ ರೈಫ‌ಲ್‌ ಮ್ಯಾನ್‌ ಆಗಿದ್ದವರು ಗೋರ್ಖಾ ರೈಫ‌ಲ್ಸ್‌ನ 3/09 ರ ಭಾಗವಾಗಿ ಕಾರ್ಯ ನಿರ್ವಹಿಸಿದ್ದ ಮಲ್ 32ನೇ ರಾಷ್ಟ್ರೀಯ ರೈಫ‌ಲ್ಸ್‌ಗೆ ಆಯ್ಕೆಯಾಗಿದ್ದರು.  2015ರ ಸೆ.2ರಂದು  ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದ ಆಪರೇಶನ್‌ ರಕ್ಷಕ್‌ ನಲ್ಲಿ ಉಗ್ರರ ವಿರುದ್ಧ ಹೋರಾಡುತ್ತಾ ಪ್ರಾಣತ್ಯಾಗ ಮಾಡಿದ್ದರು. ಹೀಗೆ ಹುತಾತ್ಮರಾಗುವುದಕ್ಕೆ ಮುನ್ನ ಅವರು ಓರ್ವ ಉಗ್ರನನ್ನು ಕೊಂದು ಇನ್ನೊಬ್ಬನನ್ನ ಗಂಭೀರವಾಗಿ ಗಾಯಗೊಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com