ಬಿಹಾರ: ರಾಜಧಾನಿ ಎಕ್ಸ್ ಪ್ರೆಸ್ ರೈಲು ಅಪಘಾತ ತಪ್ಪಿಸಿದ ರೈಲ್ವೆ ಸಿಬ್ಬಂದಿ

ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ರೈಲು ಹಳಿ ತುಂಡಾಗಿರುವುದನ್ನು ರೈಲ್ವೆ ಸಿಬ್ಬಂದಿಯೊಬ್ಬರು ಲೋಕೋ ಪೈಲಟ್ ಗಮನಕ್ಕೆ ತರುವ ಮೂಲಕ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕಟಿಹಾರ್: ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ರೈಲು ಹಳಿ ತುಂಡಾಗಿರುವುದನ್ನು ರೈಲ್ವೆ ಸಿಬ್ಬಂದಿಯೊಬ್ಬರು ಲೋಕೋ ಪೈಲಟ್ ಗಮನಕ್ಕೆ ತರುವ ಮೂಲಕ ಮಂಗಳವಾರ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿಸಿದ್ದಾರೆ.
ಪೂರ್ವ ಮಧ್ಯ ರೈಲ್ವೆಯ ವಕ್ತಾರ ರಾಜೇಶ್ ಕುಮಾರ್ ಅವರ ಪ್ರಕಾರ, ನವದೆಹಲಿ- ದಿಬ್ರುಗಢ ರಾಜಧಾನಿ ಎಕ್ಸ್ ಪ್ರೆಸ್ ರೈಲು ಆಗಮಿಸುವ ಕೆಲವೇ ನಿಮಿಷಗಳ ಮುನ್ನ ರೈಲ್ವೆ ಸಿಬ್ಬಂದಿ ಶಿವಾನಂದನ್ ಅವರು ಕಟಿಹಾರ್ ಜಿಲ್ಲೆಯ ಮನ್ಸಿ-ಮಹೇಶ್ ಖುಂಟ್ ಬಳಿ ರೈಲು ಹಳಿ ತುಂಡಾಗಿರುವುದನ್ನು ಗಮನಸಿದ್ದಾರೆ. ಕೂಡಲೇ ಹಳಿ ಮೇಲೆ ಡಿಟೋನೇಟರ್ ಇರಿಸಿ, ರೈಲು ನಿಲ್ಲಿಸುವ ಫ್ಲ್ಯಾಗ್ ನೊಂದಿಗೆ ಓಡಿದ್ದಾರೆ.
ಕೆಂಪು ಬ್ಯಾನರ್ ನ ಫ್ಲ್ಯಾಗ್ ನೋಡಿದ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ಚಾಲಕ ತಕ್ಷಣವೇ ರೈಲು ನಿಲ್ಲಿಸುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಅಧಿಕಾರಿಗಳ ಸಮಿತಿ ರಚಿಸಲಾಗಿದ್ದು, ಹಳಿ ದುರಸ್ಥಿ ಕಾರ್ಯ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com