ಸೇನೆಯಲ್ಲಿ ಯಾವುದೇ ರೀತಿಯ ಧರ್ಮಾಧರಿತ ಬೇಧವಿಲ್ಲ. ಇಲ್ಲಿ ಎಲ್ಲ ಸೈನಿಕರೂ ಭಾರತೀಯ ಸೈನಿಕರೆಂದು ಗುರುತಿಸ್ಪಡುತ್ತಾರೆಯೇ ಹೊರತು ಅವರ ಜಾತಿ, ಧರ್ಮಗಳಿಂದಲ್ಲ, ನಮ್ಮ ಆಲೋಚನೆಗಳು ವಿಶಾಲವಾಗಿದ್ದರೆ ಮಾತ್ರ ನಾವು ವಿಶಾಲವಾಗಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಣಿವೆ ರಾಜ್ಯದ ಯುವಕರನ್ನು ಪ್ರೋತ್ಸಾಹಿಸಿ ಅವರು ಉಗ್ರತ್ವ ತೊರೆದು ವಾಪಸ್ ಬರುವಂತೆ ಮಾಡಬೇಕು. ಪ್ರಮುಖವಾಗಿ ಯುವಕರು ಉಗ್ರ ಸಂಘಟನೆಗಳನ್ನು ಸೇರುತ್ತಿದ್ದು, ಇದು ಕಾಶ್ಮೀರ ಸಮಸ್ಯೆ ಬಿಗಡಾಯಿಸುವಂತೆ ಮಾಡಿದೆ. ಈ ಪೈಕಿ ಸಾಮಾಜಿಕ ಜಾಲತಾಣಗಳ ಪಾತ್ರ ಕೂಡ ಪ್ರಮುಖವಾಗಿದ್ದು, ಇಲ್ಲಿ ಪ್ರಸಾರವಾಗುವ ಸಣ್ಣ ಪುಟ್ಟ ವಿಚಾರಗಳೂ ಕೂಡ ಯುವಕರನ್ನು ಉಗ್ರವಾದದತ್ತ ತೆರಳುವಂತೆ ಪ್ರಚೋದನೆ ನೀಡುತ್ತದೆ. ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕಿದೆ ಎಂದು ಅನ್ಹು ಹೇಳಿದರು.