
ನವದೆಹಲಿ: ಇರಾನ್ ನ ಅಧ್ಯಕ್ಷ ಹಸನ್ ರೌಹಾನಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಆಹ್ವಾನದ ಮೇರೆಗೆ ನಾಳೆಯಿಂದ ಮೂರು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಫೆ. 17 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಂದ ಇರಾನ್ ಅಧ್ಯಕ್ಷ ರೌಹಾನಿ ಅವರಿಗೆ ಬೀಳ್ಕೂಡುಗೆ ಸಮಾರಂಭ ಆಯೋಜಿಸಲಾಗಿದೆ.
ಪ್ರವಾಸದ ವೇಳೆ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯ ಪ್ರಗತಿ ಕುರಿತು ಪರಾಮರ್ಶೆ ನಡೆಯಲಿದೆ. ಹಾಗೂ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳಲ್ಲಿನ ಪರಸ್ಪರ ಹಿತಸಕ್ತಿ ವಿನಿಮಯವೂ ನಡೆಯಲಿದೆ.
ಪ್ರಧಾನಮಂತ್ರಿ ನರೇಂದ್ರಮೋದಿ ಮೇ 2016ರಂದು ಇರಾನ್ ಪ್ರವಾಸ ಕೈಗೊಂಡಿದ್ದರು. ದೆಹಲಿಯಲ್ಲಿನ ಅಧಿಕೃತ ಪ್ರವಾಸ ಹೊರತಾಗಿಯೂ ಹಸನ್ ರೌಹಾನಿ ಹೈದ್ರಾಬಾದಿಗೂ ಭೇಟಿ ನೀಡಲಿದ್ದಾರೆ.
Advertisement