ಮಾ.1ರಿಂದ ಕೇರಳ ಬಸ್ ಪ್ರಯಾಣ ದರ ಹೆಚ್ಚಳ

ಕೇರಳ ಸರ್ಕಾರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತಿರುವನಂತಪುರಂ: ಕೇರಳ ಸರ್ಕಾರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ ಮಾಡಿದೆ.
ಸಾಮಾನ್ಯ ಬಸ್ಸುಗಳ ಕನಿಷ್ಟ ಪ್ರಯಾಣ ದರವನ್ನು ಈಗಿನ 5 ರುಪಾಯಿಂದ 8 ರುಪಾಯಿಗೆ ಏರಿಸಲಾಗಿದೆ ಮತ್ತು ವೇತದೂತ ಬಸ್ ಗಳ ಪ್ರಯಾಣ ದರವನ್ನು 10 ರುಪಾಯಿಂದ 11 ರುಪಾಯಿಗೆ ಏರಿಸಲಾಗಿದೆ. 
ಕನಿಷ್ಠ ಪ್ರಯಾಣದ ದರ ಏರಿಕೆಯೊಂದಿಗೆ ಪ್ರತಿ ಕಿ.ಮೀ. ಪ್ರಯಾಣ ದರದವನ್ನೂ ಹೆಚ್ಚಳ ಮಾಡಿದ್ದು, ಪ್ರತಿ ಕಿ.ಮೀ.ಗೆ  8 ಪೈಸೆ ಮತ್ತು ಆರು ಪೈಸೆ ಹೆಚ್ಚಳ ಮಾಡಲಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೊಗೆದುಕೊಳ್ಳಲಾಗಿದೆ. 
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಎ ಕೆ ಶೆಶೇಂದ್ರನ್ ಅವರು, ಖರ್ಚು ವೆಚ್ಚ ಸರಿದೂಗಿಸಲು ಪ್ರಯಾಣ ದರ ಏರಿಕೆ ಅನಿವಾರ್ಯವಾಗಿತ್ತು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com