ಆಸ್ಟ್ರೇಲಿಯಾಗೂ ಲಗ್ಗೆ ಇಟ್ಟ ಓಲಾ: ಪ್ರಾಯೋಗಿಕವಾಗಿ 2 ರೈಡ್ ಉಚಿತ

ಭಾರತದಲ್ಲಿ ಯಶಸ್ಸು ಕಂಡಿರುವ ಓಲಾ ಈಗ ಆಸ್ಟ್ರೇಲಿಯಾದ ಪರ್ತ್ ನಲ್ಲಿಯೂ ತನ್ನ ಸೇವೆ ಪ್ರಾರಂಭಿಸುವುದಾಗಿ ಹೇಳಿದೆ.
ಓಲಾ
ಓಲಾ
Updated on: 
ಬೆಂಗಳೂರು: ಭಾರತದಲ್ಲಿ ಯಶಸ್ಸು ಕಂಡಿರುವ ಓಲಾ ಈಗ ಆಸ್ಟ್ರೇಲಿಯಾದ ಪರ್ತ್ ನಲ್ಲಿಯೂ ತನ್ನ ಸೇವೆ ಪ್ರಾರಂಭಿಸುವುದಾಗಿ ಹೇಳಿದೆ. 
ಓಲಾ ಸೇವೆಯ ಉದ್ಘಾಟನೆ ಹಿನ್ನೆಲೆಯಲ್ಲಿ ಪರ್ತ್ ನಗರದಲ್ಲಿನ ಸ್ಥಳಿಯ ಜನರಿಗೆ 2 ರೈಡ್ ಗಳನ್ನು ಉಚಿತವಾಗಿ ನೀಡುವುದಾಗಿ ಓಲಾ ಸಂಸ್ಥೆ ತಿಳಿಸಿದೆ. ಪರ್ತ್ ನಲ್ಲಿರುವ ಜನತೆ ಓಲಾ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದ್ದು, 10 ಡಾಲರ್ ವರೆಗಿನ ಮೊದಲ ಎರಡು ರೈಡ್ ಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಓಲಾ ತಿಳಿಸಿದೆ. 
ಆಸ್ಟ್ರೇಲಿಯಾದ ಸ್ಥಳೀಯ ಕ್ಯಾಬ್ ಸೇವೆಗಳ ಸಹಭಾಗಿತ್ವದಲ್ಲಿ ಓಲಾ ಕ್ಯಾಬ್ ಸೇವೆ ಪ್ರಾರಂಭವಾಗಿದ್ದು, ಈ ಬಗ್ಗೆ ಜನವರಿಯಲ್ಲೇ ಓಲಾ ಮಾಹಿತಿ ನೀಡಿತ್ತು.  ಆಸ್ಟ್ರೇಲಿಯಾದಲ್ಲಿ ತನ್ನ ಸೇವೆಯನ್ನು ಹೇಗೆ ಉತ್ತಮಗೊಳಿಸಬಹುದೆಂಬುದರ ಬಗ್ಗೆ ಓಲಾ ಪ್ರಾಯೋಗಿಕ ರೈಡ್ ಗಳಲ್ಲಿ ಪ್ರಯಾಣಿಕರಿಂದ ಅಭಿಪ್ರಾಯ ಸಂಗ್ರಹಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com