ಇಸ್ರೇಲ್ ಪ್ರಧಾನಿ ವಿರುದ್ಧ ಭ್ರಷ್ಟಾಚಾರದ ಆರೋಪ; ದೋಷಾರೋಪಣೆ ಪಟ್ಟಿಯಲ್ಲಿ ರತನ್ ಟಾಟಾ ಹೆಸರು!

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಭ್ರಷ್ಟಾಚಾರದ ಆರೋಪ ಪಟ್ಟಿಯಲ್ಲಿ ಬೆಂಜಮಿನ್ ನೇತನ್ಯಾಹು ವಿರುದ್ಧವೂ ದೋಷಾರೋಪಣೆ ಹೊರಿಸಲು ಇಸ್ರೇಲ್
ರತನ್ ಟಾಟ
ರತನ್ ಟಾಟ
ಜೆರುಸಲೇಮ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಭ್ರಷ್ಟಾಚಾರದ ಆರೋಪ ಪಟ್ಟಿಯಲ್ಲಿ ಬೆಂಜಮಿನ್ ನೇತನ್ಯಾಹು ವಿರುದ್ಧವೂ ದೋಷಾರೋಪಣೆ ಹೊರಿಸಲು ಇಸ್ರೇಲ್ ಪೊಲೀಸರು ಶಿಫಾರಸ್ಸು ಕೋರಿದ್ದಾರೆ. 
ಇಸ್ರೇಲ್ ಪ್ರಧಾನಿ ನೇತನ್ಯಾಹು ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪದಲ್ಲಿ   ಭಾರತೀಯ ಉದ್ಯಮಿ ರತನ್ ಟಾಟಾ ಅವರ ಹೆಸರೂ ಇದೆ. ಆದರೆ ರತನ್ ಟಾಟಾ ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ. ಬೆಂಜಮಿನ್ ನೇತನ್ಯಾಹು ಹಾಗೂ ಅವರ ಪತ್ನಿ ಸಾರಾ ವಿರುದ್ಧ ಬಿಲೆನಿಯರ್ ಫಲಾನುಭವಿಗಳಿಂದ ಅಕ್ರಮ ಉಡುಗೊರೆಗಳನ್ನು ಪಡೆದಿರುವ ಆರೋಪ ಕೇಳಿಬಂದಿದ್ದು, ಇದರಲ್ಲಿ ರತನ್ ಟಾಟಾ ಸಹ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. 
ರಕ್ಷಣಾ ಸಂಸ್ಥೆ ಶಿಫಾರಸ್ಸುಗಳ ವಿರುದ್ಧವಾಗಿ ಯೋಜನೆಯೊಂದು ಜಾರಿಯಾಗಲು ಸಿದ್ಧವಾಗಿತ್ತು, ಇದರಿಂದಾಗಿ ಟಾಟಾ ಹಾಗೂ ಹಾಲಿವುಡ್ ನ ನಿರ್ಮಾಪಕ ಮಿಲ್ಚನ್ ಗೆ ಲಾಭವಾಗುತ್ತಿತ್ತು, ಆದರೆ ಭದ್ರತಾ ವೆಚ್ಚ ಅನಗತ್ಯವಾಗಿ ಖರ್ಚಾಗಲಿದ್ದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಡಲಾಯಿತು ಎಂದು ಅಲ್ಲಿನ ಸುದ್ದಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com