ದೆಹಲಿಯಲ್ಲಿ ಶಂಕಿತ ಮುಜಾಹಿದ್ದೀನ್ ಉಗ್ರನ ಬಂಧನ
ನವದೆಹಲಿ : ದೆಹಲಿ ಪೊಲೀಸರು ಶಂಕಿತ ಭಾರತೀಯ ಮುಜಾಹಿದ್ದೀನ್ ಸಂಘಟನೆಯ ಉಗ್ರನನ್ನು ಬಂಧಿಸಿದ್ದಾರೆ. ಅರಿಜ್ ಖಾನ್ ಬಂಧಿತ ಉಗ್ರನಾಗಿದ್ದು, 2008ರ ಬಾತ್ಲಾ ಹೌಸ್ ಎನ್ ಕೌಂಟರ್ ಪ್ರಕರಣದಲ್ಲೂ ಈತನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಬಾತ್ಲಾ ಹೌಸ್ ನಲ್ಲಿ ಇತರ ನಾಲ್ಕುಮಂದಿಯೊಂದಿಗೆ ವಾಸಿಸುತ್ತಿದ್ದ, ಜಾಮೀಯಾ ನಗರದಲ್ಲಿ 2008 ಸೆಪ್ಟೆಂಬರ್ 19 ರಂದು ನಡೆದಿದ್ದ ಎನ್ ಕೌಂಟರ್ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ಎನ್ ಕೌಂಟರ್ ವೇಳೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದರು. ಹಲವು ಮಂದಿಯನ್ನು ಬಂಧಿಸಲಾಗಿತ್ತು, ಕಾರ್ಯಾಚರಣೆ ವೇಳೆ ಇನ್ಸ್ ಪೆಕ್ಟರ್ ಮೋಹನ್ ಚಂದ್ ಶರ್ಮಾ ಕೂಡಾ ಸಾವನ್ನಪ್ಪಿದ್ದರು.
ಬಾತ್ಲಾ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ 2013 ರಂದು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಶಹಜಾದ್ ಅಹಮ್ಮದ್ ನಿಗೆ ವಿಚಾರಣಾ ನ್ಯಾಯಾಲಯ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿತ್ತು,ಇದನ್ನು ವಿರೋಧಿಸಿ ಈತ ಹೈಕೋರ್ಟಿಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಇನ್ನೂ ಇತ್ಯರ್ಥಗೊಂಡಿಲ್ಲ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ