ಕ್ಯಾಬ್ ಚಾಲಕ ಆಗಿರುವ ಕೆರುಕೊಂಡ ರಾಜಶೇಖರ್ ಮತ್ತು ಪತ್ನಿ ಶ್ರೀಲತಾ ಮಂತ್ರವಾದಿಯ ಸಲಹೆಯಂತೆ ಇತ್ತೀಚೆಗೆ ನಡೆದ ಚಂದ್ರ ಗ್ರಹಣದ ದಿನ (ಜ.31) ತಮ್ಮ ಮಗಳನ್ನು ದೇವರಿಗೆ ಬಲಿ ನೀಡಿದ್ದಾರೆ. ಮಾಂತ್ರಿಕನ ಸಲಹೆಯಂತೆ ಅಂದು ಮಗುವನ್ನು ಕರೆದುಕೊಂಡು ನದಿ ತಟಕ್ಕೆ ತೆರಳಿದ್ದ ದಂಪತಿ ಅಲ್ಲಿ ಮಗುವಿನ ಕತ್ತು ಸೀಳಿ ಕೊಂದಿದ್ದಾರೆ. ಆ ಬಳಿಕ ಮಗುವಿನ ತಲೆಗೆ ಪೂಜೆ ನೆರವೇರಿಸಲಿಕ್ಕಾಗಿ ಮನೆಗೆ ತಂದಿದ್ದಾರೆ ಎಂಡು ಪೋಲೀಸರು ತಿಳಿಸಿದರು.