'2015ರಲ್ಲೇ ಚೋಕ್ಸಿ ವಿರುದ್ಧ ದೂರು ನೀಡಿದ್ದೆ, ಆದರೆ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ': ಉದ್ಯಮಿ ಹೇಳಿಕೆ

ಬ್ಯಾಂಕಿಂಗ್ ವಲಯದ ಅತೀ ದೊಡ್ಡ ವಂಚನೆ ಪ್ರಕರಣ ಎಂದು ಹೇಳಲಾಗುತ್ತಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚೋಕ್ಸಿ ವಿರುದ್ಧ 2015ರಲ್ಲಿ ನಾನು ದೂರು ನೀಡಿದ್ದೆ ಎಂದು ಗುಜರಾತ್ ಮೂಲದ ಉದ್ಯಮಿಯೊಬ್ಬರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಹ್ಮದಾಬಾದ್: ಬ್ಯಾಂಕಿಂಗ್ ವಲಯದ ಅತೀ ದೊಡ್ಡ ವಂಚನೆ ಪ್ರಕರಣ ಎಂದು ಹೇಳಲಾಗುತ್ತಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚೋಕ್ಸಿ ವಿರುದ್ಧ 2015ರಲ್ಲಿ ನಾನು ದೂರು  ನೀಡಿದ್ದೆ ಎಂದು ಗುಜರಾತ್ ಮೂಲದ ಉದ್ಯಮಿಯೊಬ್ಬರು ಹೇಳಿದ್ದಾರೆ.
ಗುಜರಾತ್ ನ ಭಾವ್ ನಗರದ ಆಭರಣ ವ್ಯಾಪಾರಿ ದಿಗ್ವಿಜಯ್ ಸಿಂಗ್ ಜಡೇಜಾ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು, 2015ರಲ್ಲೇ ಗೀತಾಂಜಲಿ ಸಂಸ್ಥೆಯ ನಿರ್ದೇಶಕ ಮೆಹುಲ್ ಚೋಕ್ಸಿ ವಿರುದ್ಧ  ಗುಜರಾತ್ ಸರ್ಕಾರ ಮತ್ತು  ಹೈಕೋರ್ಟ್ ನಲ್ಲಿ ದೂರು ದಾಖಲು ಮಾಡಿದ್ದೆ. ಆದರೆ ಅಂದು ನನ್ನ ದೂರನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಬದಲಿಗೆ ನನ್ನ ಮೇಲೆ ಒತ್ತಡ ಹೇರಿ ನನ್ನ ಬಾಯಿ ಮುಚ್ಚಿಸಿದ್ದರು. ಅಂದು ಚೋಕ್ಸಿಗೆ ಬೆಂಬಲ ನೀಡದೇ  ಇದ್ದಿದ್ದರೆ ಇಂದು ಇಷ್ಟು ದೊಡ್ಡ ಹಗರಣ ನಡೆಯುತ್ತಲೇ ಇರಲಿಲ್ಲ ಎಂದು ಹೇಳಿದ್ದಾರೆ.
ಅಂದು ನಾನು ದೂರು ನೀಡುವಾಗ ಸ್ವತಃ ಗುಜರಾತ್ ಸರ್ಕಾರ ಉದ್ಯಮಿ ಮೆಹುಲ್ ಚೋಕ್ಸಿ ಬೆನ್ನಿಗೆ ನಿಂತಿತ್ತು. ಅಲ್ಲಿಗೂ ನಿರಂತರವಾಗಿ ನಾನು ಗುಜರಾತ್ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದೆ. ಅಲ್ಲದೆ ಗುಜರಾತ್ ಹೈಕೋರ್ಟ್  ನಲ್ಲೂ ದೂರು ದಾಖಲಿಸಿದ್ದೆ. ಅಂದೇ ಮೆಹುಲ್ ಚೋಕ್ಸಿ ವಿರುದ್ಧ ದೂರು ದಾಖಲಿಸಿಕೊಂಡು, ಆತನ ಪಾಸ್ ಪೋರ್ಟ್ ಅಮಾನತು ಮಾಡಿದ್ದರೆ ಆತ ಇಂದು ದೇಶ ಬಿಟ್ಟು ಪರಾರಿಯಾಗುತ್ತಿರಲಿಲ್ಲ ಎಂದು ದಿಗ್ವಿಜಯ್ ಸಿಂಗ್ ಜಡೇಜಾ  ಹೇಳಿದ್ದಾರೆ.
ಚೋಕ್ಸಿ ಅಂದು ತಮಗೆ ಸುಮಾರು 60 ಕೋಟಿ ರೂ.ಗಳಷ್ಟು ವಂಚನೆ ಮಾಡಿದ್ದ. ಇದೀಗ  9,872 ಕೋಟಿಗಳನ್ನು ಅಧಿಕೃತವಾಗಿ ಬ್ಯಾಂಕ್ ಗಳಿಂದ ಲೂಟಿ ಮಾಡಿದ್ದಾನೆ ಎಂದು ಜಡೇಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com