ಪಿಎನ್ ಬಿ ವಂಚನೆ ಪ್ರಕರಣವೂ ಸೇರಿ ಭಾರತದಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳ ಮೊತ್ತ 60 ಸಾವಿರ ಕೋಟಿ!

ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ವಂಚನೆ ಪ್ರಕರಣವೂ ಸೇರಿದಂತೆ ದೇಶದಲ್ಲಿ ನಡೆದ ವಿವಿಧ ಬ್ಯಾಂಕ್ ವಂಚನೆ ಪ್ರಕರಣ ಮೌಲ್ಯ ಸುಮಾರು 60 ಸಾವಿರ ಕೋಟಿ ರೂಗಳಷ್ಟಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ವಂಚನೆ ಪ್ರಕರಣವೂ ಸೇರಿದಂತೆ ದೇಶದಲ್ಲಿ ನಡೆದ ವಿವಿಧ ಬ್ಯಾಂಕ್ ವಂಚನೆ ಪ್ರಕರಣ ಮೌಲ್ಯ ಸುಮಾರು 60 ಸಾವಿರ ಕೋಟಿ ರೂಗಳಷ್ಟಿದೆ ಎಂದು ತಿಳಿದುಬಂದಿದೆ.
ಸುದ್ದಿಸಂಸ್ಥೆಗೆ ಲಭಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿ ಹಕ್ಕು ಕಾಯ್ದೆ ಮಾಹಿತಿಯನ್ವಯ ಭಾರತದಲ್ಲಿ ಸುಮಾರು 60 ಸಾವಿರ ಕೋಟಿ ರೂ. ಮೌಲ್ಯದ ಬ್ಯಾಂಕ್ ವಂಚನೆ  ಪ್ರಕರಣಗಳು ನಡೆದಿವೆಯಂತೆ. ಈ ಪೈಕಿ ಸರ್ಕಾರಿ ಆಡಳಿತ ಇರುವ ಬ್ಯಾಂಕ್ ಗಳಲ್ಲೇ ಸುಮಾರು 8, 670 ಕೋಟಿ ರೂ ವಂಚನೆಗಳಾಗಿದೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಕಳೆದ ಒಂದೇ ವರ್ಷದಲ್ಲಿ ಅತೀ ಹೆಚ್ಚು 149  ಬಿಲಿಯನ್ ಡಾಲರ್ ಮೊತ್ತದ ಬ್ಯಾಂಕ್ ವಚನೆ ನಡೆದಿದೆ. 2012-13ನೇ ಸಾಲಿನಲ್ಲಿ 63.57 ಬಿಲಿಯನ್ ಡಾಲರ್ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಗಳು ದಾಖಲಾಗಿದೆ. 
ಆರ್ ಟಿಐ ಅರ್ಜಿ ಮೂಲಕ ಭಾರತದ ಪ್ರಮುಖ 21 ಬ್ಯಾಂಕ್ ಗಳ ಪೈಕಿ 20 ಬ್ಯಾಂಕ್ ಗಳಲ್ಲಿನ ವಂಚನೆ ಪ್ರಕರಣದ ಮಾಹಿತಿ ಲಭ್ಯವಾಗಿದ್ದು, ಪ್ರಸ್ತುತ ವಂಚನೆ ಪ್ರಕರಣ ಸಂಬಂಧ ಕೇಂದ್ರ ಬಿಂದುವಾಗಿರುವ ಪಂಜಾಬ್ ನ್ಯಾಷನಲ್  ಬ್ಯಾಂಕ್ ಒಂದರಲ್ಲೇ 65.62 ಬಿಲಿಯನ್ ಡಾಲರ್ ಮೊತ್ತದ ಸುಮಾರು 389 ವಂಚನೆ ಪ್ರಕರಣಗಳು ದಾಖಲಾಗಿವೆ. ಎರಡನೇ ಸ್ಥಾನದಲ್ಲಿ ಬ್ಯಾಂಕ್ ಆಫ್ ಬರೋಡಾ ಇದ್ದು, 44.73 ಬಿಲಿಯನ್ ಡಾಲರ್ ಮೊತ್ತದ 389 ಪ್ರಕರಣಗಳು  ದಾಖಲಾಗಿವೆ. ಇನ್ನು ಪಟ್ಟಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾ ಮೂರನೇ ಸ್ಥಾನದಲ್ಲಿದ್ದು, 40.5 ಬಿಲಿಯನ್ ಡಾಲರ್ ಮೊತ್ತದ 231 ಪ್ರಕರಣಗಳು ದಾಖಲಾಗಿವೆ.
ಎಸ್ ಬಿಐ ಕೂಡ ಹೊರತಾಗಿಲ್ಲ
ಇನ್ನು ದೇಶದ ಅತೀ ದೊಡ್ಡ ಬ್ಯಾಂಕ್ ಎಂಬ ಖ್ಯಾತಿ ಪಡೆದಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಕೂಡ ವಂಚನೆ ಪ್ರಕರಣದಿಂದ ಹೊರತಾಗಿಲ್ಲ. ಎಸ್ ಬಿಐನಲ್ಲೂ 1,069 ವಂಚನೆ ಪ್ರಕರಣಗಳು ದಾಖಲಾಗಿದ್ದು, ಈ  ಪ್ರಕರಣಗಳ ಒಟ್ಟು ಮೌಲ್ಯ ಮಾತ್ರ ಇನ್ನು ಬಹಿರಂಗವಾಗಿಲ್ಲ. ವಿಜಯ್ ಮಲ್ಯ ಪ್ರಕರಣದ ಬಳಿಕ ಆರ್ ಬಿಐ ಎಚ್ಚೆತ್ತುಕೊಂಡಿದೆಯಾದರೂ ಇದಕ್ಕೂ ಮೊದಲು ಬ್ಯಾಂಕ್ ಗಳಿಗಾಗಿರುವ ವಂಚನೆ ಪ್ರಮಾಣವೇ ಅತೀ ಹೆಚ್ಚಿನ  ಪ್ರಮಾಣದ್ದಾಗಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com