ಧಸ್ವಂತ್
ಧಸ್ವಂತ್

ಹಸೀನಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಧಸ್ವಂತ್ ದೋಷಿ , ಮಹಿಳಾ ನ್ಯಾಯಾಲಯ ತೀರ್ಪು

ಚಂಗಲ್ ಪೇಟ್ ನ ಮಹಿಳಾ ನ್ಯಾಯಾಲಯವು ಏಳು ವರ್ಷದ ಹಸೀನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಟೆಕ್ಕಿ ಎಸ್.ಧಸ್ವಂತ್ (23) ದೋಷಿ ಎಂದು ತಿರ್ಪು ನೀಡಿದೆ.
Published on
ಚೆನ್ನೈ: ಚಂಗಲ್ ಪೇಟ್ ನ ಮಹಿಳಾ ನ್ಯಾಯಾಲಯವು ಏಳು ವರ್ಷದ ಹಸೀನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ  ಟೆಕ್ಕಿ ಎಸ್.ಧಸ್ವಂತ್ (23) ದೋಷಿ ಎಂದು ತಿರ್ಪು ನೀಡಿದೆ. 
ಜನರಿಂದ ತುಂಬಿದ್ದ ನ್ಯಾಯಾಲಯದ ಸಭಾಂಗಣದಲ್ಲಿ ನ್ಯಾಯಾಧೀಶರು ಈ ತೀರ್ಪು ಪ್ರಕಟಿಸಿದ್ದು ಆರೋಪಿ ಎಸ್.ಧಸ್ವಂತ್ ವಿರುದ್ಧ ಪೋಸ್ಕೋ ಕಾಯ್ದೆ ಸೇರಿ ಅನೇಕ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ದೊಷಿಯಾಗಿರುವ ಎಸ್.ಧಸ್ವಂತ್ ನ ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯ ಇನ್ನಷ್ಟೇ ಪ್ರಕಟಿಸಬೇಕಿದೆ. 
ಆರೋಪಿ ಧನ್ವಂತ್ ಕಳೆದ ವರ್ಷ ಫೆ.6 ರಂದು ಹಸೀನಿ ಎನ್ನುವ ಏಳುವ ರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ. ಆ ಬಳಿಕ ಬಾಲಕಿಯ ದೇಹವನ್ನು ಸುಟ್ಟು ಹಾಕಿದ್ದ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com