ಸಾಂದರ್ಭಿಕ ಚಿತ್ರ
ದೇಶ
ಬಾಯ್ ಫ್ರೆಂಡ್ ಗೆ ವಿಡಿಯೋ ಕಾಲ್ ಮಾಡಿ ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ
ಬಾಯ್ ಫ್ರೆಂಡ್ ಗೆ ವಿಡಿಯೋ ಕಾಲ್ ಹಾಸ್ಟೆಲ್ ಕೊಠಡಿಯಲ್ಲಿ ಎಂಬಿಎ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅನಂತಪುರದಲ್ಲಿ ನಡೆದಿದೆ....
ಹೈದರಾಬಾದ್: ಬಾಯ್ ಫ್ರೆಂಡ್ ಗೆ ವಿಡಿಯೋ ಕಾಲ್ ಹಾಸ್ಟೆಲ್ ಕೊಠಡಿಯಲ್ಲಿ ಎಂಬಿಎ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅನಂತಪುರದಲ್ಲಿ ನಡೆದಿದೆ.
ಅನಂತಪುರದ ಮೂಲದ ಹನೀಶಾ ಚೌಧುರಿ ಎಂಬಾಕೆ ಶಿವಶಿವಾನಿ ಕಾಲೇಜಿನಲ್ಲಿ ದ್ವಿತೀಯ ಎಂಬಿಎ ವ್ಯಾಸಂಗ ಮಾಡುತ್ತಿದ್ದು ಪೆಟ್ ಬಶೀರಾಬಾದ್ ನಲ್ಲಿರುವ ಹಾಸ್ಟೆಲ್ ನಲ್ಲಿ ವಾಸವಿದ್ದಳು.
ತನ್ನ ಕ್ಲಾಸ್ ಮೇಟ್ ದಕ್ಷಿತ್ ಪಟೇಲ್ ಎಂಬಾತನನ್ನು ಪ್ರೇಮಿಸುತ್ತಿದ್ದಳು. ಶನಿವಾರ ಸಂಜೆ ದಕ್ಷಿತ್ ಗೆ ವಿಡಿಯೋ ಕಾಲ್ ಮಾಡಿದ ಹನೀಶಾ ತನಗೆ ಬದುಕಿರಲು ಇಷ್ಟವಿಲ್ಲ ಎಂದು ಹೇಳಿ ಹಾಸ್ಚೆಲ್ ನ ಕೋಣೆಯ ಸೀಲಿಂಗ್ ಗೆ ನೇಣು ಹಾಕಿಕೊಂಡಿದ್ದಾಳೆ.
ಕೂಡಲೇ ಕಾಲೇಜಿನ ಹಾಸ್ಟೆಲ್ ದಕ್ಷಿತ್ ಓಡಿ ಬಂದಿದ್ದಾನೆ, ತನ್ನ ಸ್ನೇಹಿತರ ಜೊತೆ ಸೇರಿ ಕೊಠಡಿಯ ಬಾಗಿಲು ಮುರಿದರೂ ಪ್ರಯೋಜನವಾಗಿಲ್ಲ, ಆಕೆಯ ಪ್ರಾಣ ಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿತ್ ಭಾನುವಾರ ಮುಂಜಾನೆ ಹನೀಶ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾನೆ, ಶವವನ್ನು ಗಾಂಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ