ಸಂಗ್ರಹ ಚಿತ್ರ
ದೇಶ
ಪಾಕ್ ಬಿಎಟಿ ದಾಳಿ ವಿಫಗೊಳಿಸಿದ ಭಾರತೀಯ ಸೇನೆ: ಓರ್ವ ಉಗ್ರನ ಹತ್ಯೆ, 3 ಯೋಧರಿಗೆ ಗಾಯ
ಜಮ್ಮು ಮತ್ತು ಕಾಶ್ಮೀರ ಬುದ್ಗಾಂನಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಬಾರ್ಡನ್ ಆ್ಯಕ್ಷನ್ ಟೀಮ್ (ಬಿಎಟಿ) ನಡೆಸಿದ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಿದೆ ಎಂದು ಸೋಮವಾರ ತಿಳಿದುಬಂದಿದೆ...
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಬಾರ್ಡನ್ ಆ್ಯಕ್ಷನ್ ಟೀಮ್ (ಬಿಎಟಿ) ನಡೆಸಿದ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಿದೆ ಎಂದು ಸೋಮವಾರ ತಿಳಿದುಬಂದಿದೆ.
ಇಂದು ಬೆಳಿಗ್ಗೆ ಗಡಿ ನುಸುಳಲು ಪಾಕಿಸ್ತಾನದ ಬಿಎಟಿ ಉಗ್ರ ಯತ್ನ ನಡೆಸುತ್ತಿದ್ದ. ಈ ವೇಳೆ ಭದ್ರತಾ ಪಡೆಗಳು ಹಲವು ಬಾರಿ ಎಚ್ಚರಿಕೆಗಳನ್ನು ನೀಡಿದ್ದರೂ ತನ್ನ ಯತ್ನವನ್ನು ಮುಂದುವರೆಸಿದ್ದ. ಈ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದಾರೆ.
ಈ ವೇಳೆ ಉಗ್ರ ಸೇನಾಪಡೆಗಳತ್ತ ಆರ್'ಪಿಜಿ ಸ್ಫೋಟಿಸಿದ್ದಾನೆ. ಪರಿಣಾಮ ಮೂವರು ಯೋಧರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಬಳಿಕ ಭದ್ರತಾ ಪಡೆಗಳು ದಾಳಿಗೆ ದಿಟ್ಟ ಉತ್ತರ ನೀಡುವ ಮೂಲಕ ಉಗ್ರನನ್ನು ಹತ್ಯೆ ಮಾಡಿದ್ದಾರೆಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ