ಈ ಬಗ್ಗೆ ಅಧಿಕಾರಿಗಳ ತನಿಖೆಯ ವೇಳೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿವೃತ್ತ ಅಧಿಕಾರಿ ಗೋಕುಲ್ ನಾಥ್ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಯಾವುದೇ ಬ್ಯಾಂಕ್, ವಿದೇಶದಲ್ಲಿನ ಇತರೆ ಬ್ಯಾಂಕ್ ಗಳ ಶಾಖೆಗೆ ಹಣ ವರ್ಗಾವಣೆ ಮಾಡಲು ಸ್ವಿಫ್ಟ್ ಎಂಬ ತಂತ್ರಜ್ಞಾನ ಬಳಸುತ್ತದೆ. ಬ್ಯಾಂಕ್ ನಲ್ಲಿ ಹಣ ವರ್ಗಾವಣೆ ಹೊತ್ತ ಕಾರಣ ಗೋಕುಲ್ ನಾಥ್ ಶೆಟ್ಟಿಗೆ ಈ ಪಾಸ್ ವರ್ಡ್ ಗೊತ್ತಿತ್ತು. ಅವರು ಈ ಪಾಸ್ ವರ್ಡ್ ಅನ್ನು ನೀರವ್ ಮೋದಿ ಕಂಪನಿಯ ಉದ್ಯೋಗಿಗಳಾದ ಹೇಮಂತ್ ಭಟ್ ಮತ್ತು ಇತರರೊಂದಿಗೆ ಹಂಚಿಕೊಂಡಿದ್ದರು ಎಂದು ವರದಿಯಾಗಿದೆ.