ಹರ್ಯಾಣ: ಐತಿಹಾಸಿಕ ಶಿವನ ದೇವಾಲಯಲ್ಲಿ ಕೋಟಿ ರು. ಮೌಲ್ಯದ ಚಿನ್ನಾಭರಣ ಕಳವು

ಹರ್ಯಾಣದ ಪಂಚಕುಲದಲ್ಲಿರುವ ಐತಿಹಾಸಿಕ ಶಿವನ ದೇವಾಲಯದಲ್ಲಿ ಸುಮಾರು 1 ಕೋಟಿ ರು. ಮೌಲ್ಯದ ಚಿನ್ನಾಭರಣ ಕಳುವಾಗಿದೆ. ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಚಂಡಿಘಡ: ಹರ್ಯಾಣದ ಪಂಚಕುಲದಲ್ಲಿರುವ ಐತಿಹಾಸಿಕ ಶಿವನ ದೇವಾಲಯದಲ್ಲಿ ಸುಮಾರು 1 ಕೋಟಿ ರು. ಮೌಲ್ಯದ ಚಿನ್ನಾಭರಣ ಕಳುವಾಗಿದೆ. 
ಫೆಬ್ರವರಿ18-19 ರ ಮಧ್ಯರಾತ್ರಿ ಈ ಕಳ್ಳತನ ನಡೆದಿದ್ದು, ಇಡೀ ಕಳ್ಳತನ ಪ್ರಕರಣ ಸಿಸಿಟಿವಿಯಲ್ಲಿ ದಾಖಲಾಗಿದೆ.
ಕಳ್ಳರು ದೇವಾಲಯದ ಬಾಗಿಲು ಮುರಿದು ಅದರೊಳಗಿದ್ದ, ಚಿನ್ನ ಮತ್ತು ಬೆಳ್ಳಿ ಆಭರಣ ಸೇರಿದಂತೆ ಹಲವು ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಪೊಲೀಸ್ ಠಾಣೆಯಿಂದ ಸುಮಾರು 10 ಕಿಮೀ ದೂರದಲ್ಲಿ ದೇವಾಲಯವಿದ್ದು, ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ, ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಫೆಬ್ರವರಿ13-14 ರಂದು ಲಕ್ಷಾಂತರ ಭಕ್ತರು ಶಿವನ ದರ್ಶನ ಪಡೆದಿದ್ದರು.ಈ ವೇಳೆ ದೇವಾಲಯಕ್ಕೆ ಲಕ್ಷಾಂತರ ರೂ ಹಣ ಭಕ್ತರಿಂದ ಸಂಗ್ರಹವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com