ಸಿಪಿಇಸಿ
ದೇಶ
ಸಿಪಿಇಸಿ ಯೋಜನೆಯ ಸುರಕ್ಷತೆಗಾಗಿ ಬಲೂಚ್ ಭಯೋತ್ಪಾದಕರನ್ನು ಓಲೈಸುತ್ತಿರುವ ಚೀನಾ!
ಚೀನಾದ ಮಹತ್ವಾಕಾಂಕ್ಷಿ ಯೋಜನೆ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಪಾಕಿಸ್ತಾನದಲ್ಲಿ ಹೆಚ್ಚು ಅಪಾಯ ಎದುರಿಸುತ್ತಿದ್ದು, ಬಲೂಚಿಸ್ಥಾನದ ಪ್ರಾಂತ್ಯದ ಜನತೆ ಸಿಪಿಇಸಿ ಯೋಜನೆಗೆ ತೀವ್ರ ವಿರೋಧ
ಇಸ್ಲಾಮಾಬಾದ್: ಚೀನಾದ ಮಹತ್ವಾಕಾಂಕ್ಷಿ ಯೋಜನೆ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಪಾಕಿಸ್ತಾನದಲ್ಲಿ ಹೆಚ್ಚು ಅಪಾಯ ಎದುರಿಸುತ್ತಿದ್ದು, ಬಲೂಚಿಸ್ಥಾನದ ಪ್ರಾಂತ್ಯದ ಜನತೆ ಸಿಪಿಇಸಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬಲೂಚಿಸ್ಥಾನದಲ್ಲಿ ಸಿಪಿಇಸಿ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಪಿಇಸಿ ಯೋಜನೆಯ ಸುರಕ್ಷತೆಗೆ ಚೀನಾ ಬಲೂಚಿಸ್ಥಾನದಲ್ಲಿರುವ ಭಯೋತ್ಪಾದಕರನ್ನು ಓಲೈಕೆ ಮಾಡಲು ಮುಂದಾಗಿದೆ.
ಕಳೆದ 5 ವರ್ಷಗಳಿಂದ ಚೀನಾ ಬಲೂಚಿಸ್ಥಾನದಲ್ಲಿರುವ ಭಯೋತ್ಪಾದಕರೊಂದಿಗೆ ಮಾತುಕತೆ ನಡೆಸುವ ಮೂಲಕ ಅಲ್ಲಿನ ಭಯೋತ್ಪಾದಕರನ್ನು ಓಲೈಕೆ ಮಾಡಲು ಯತ್ನಿಸುತ್ತಿದೆ ಎಂದು ಡಾನ್ ಈ ಬಗ್ಗೆ ಲೇಖನ ಪ್ರಕಟಿಸಿದ್ದು, ಚೀನಾ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಹೇಳಿದೆ.
ಚೀನಾದ ಕ್ಸಿನ್ ಝಿಯಾಂಗ್ ಪ್ರಾಂತ್ಯದ ಕಶ್ಗರ್ ಪ್ರಾಂತ್ಯದಿಂದ ಪಾಕಿಸ್ತಾನದ ಗದ್ವಾರ್ ಬಂದರನ್ನು ಸಂಪರ್ಕಿಸುವ ಸಿಪಿಇಸಿ ಯೋಜನೆ ಬಲೂಚಿಸ್ಥಾನದ ರಸ್ತೆ, ರೈಲ್ವೆ, ಹೆದ್ದಾರಿಗಳ ಮೂಲಕ ಹಾದು ಹೋಗುತ್ತದೆ. ಬಲೂಚಿಸ್ಥಾನದಲ್ಲಿ ಶಾಂತಿ ಕದಡಿದ ವಾತಾವರಣ ಇದ್ದು ಬಲೂಚಿಸ್ಥಾನದಲ್ಲಿ ಶಾಂತಿ ನೆಲೆಸಿದರೆ ಚೀನಾದ ಯೋಜನೆಗೂ ಅದು ಸಹಕಾರಿ ಎಂದು ಪಾಕ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ