ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ: ಮತ್ತೆ 3 ನೌಕರರನ್ನು ಬಂಧಿಸಿದ ಸಿಬಿಐ

11 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 3 ನೌಕರರನ್ನು ಸಿಬಿಐ ಬಂಧಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್
Updated on: 
ನವದೆಹಲಿ: 11 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 3 ನೌಕರರನ್ನು ಸಿಬಿಐ ಬಂಧಿಸಿದೆ. 
ವಿದೇಶಿ ವಿನಿಮಯ ವಿಭಾಗದ ಉಸ್ತುವಾರಿ ಹಾಗೂ ಮುಂಬೈ ನಾರಿಮನ್ ಪಾಯಿಂಟ್ ಶಾಖೆಯ ಚೀಫ್ ಮ್ಯಾನೇಜರ್ ಬಿಚ್ಚು ತಿವಾರಿ, ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಗೋಕುಲ್ ನಾಥ್ ಶೆಟ್ಟಿ (ಕಳೆದ ವಾರ ಸಿಬಿಐ ನಿಂದ ಬಂಧನ) ಹಾಗೂ ಆತನ ಮ್ಯಾನೇಜರ್ ನ ಕೆಲಸಗಳನ್ನು ಮೇಲ್ವಿಚಾರಣೆ ನಡೆಸುವ ಜವಾಬ್ದಾರಿಯನ್ನೂ ತಿವಾರಿ ಹೊತ್ತಿದ್ದರು.
ವಿದೇಶಿ ವಿನಿಮಯದ ಸ್ಕೇಲ್ II ಮ್ಯಾನೇಜರ್ ಯಶ್ವಂತ್ ಜೋಷಿ ಅವರನ್ನೂ ಸಿಬಿಐ ಬಂಧಿಸಿದ್ದು ಸ್ವಿಫ್ಟ್ ಹಾಗೂ ಸಿಬಿಎಸ್ ನ ದಿನನಿತ್ಯದ ವರದಿಗಳನ್ನು ನಿರ್ವಹಣೆ ಮಾಡುತ್ತಿದ್ದರು, ಗೋಕುಲ್ ಶೆಟ್ಟಿಯ ಅಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ. 
ಇನ್ನು ರಫ್ತು ವಿಭಾಗದ ಸ್ಕೇಲ್ I ಅಧಿಕಾರಿ ಪ್ರಫುಲ್ ಸಾವಂತ್ ನ್ನೂ ಬಂಧಿಸಲಾಗಿದ್ದು, ಪ್ರತಿದಿನವೂ ಸ್ವಿಫ್ಟ್ ಮೆಸೇಜ್ ಹಾಗೂ ವರದಿಗಳನ್ನು ಪರಿಶೀಲಿಸುತ್ತಿದ್ದ ಜವಾಬ್ದಾರಿ ಹೊಂದಿದ್ದರು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com