ರೊಟೊಮ್ಯಾಕ್ ಪ್ರಕರಣ: 14 ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದ ಆದಾಯ ತೆರಿಗೆ ಇಲಾಖೆ

ರೊಟೊಮ್ಯಾಕ್ ನಿಂದ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಿಬಿಐ ಹಾಗೂ ಇಡಿ ಕಾರ್ಯಪ್ರವೃತ್ತವಾಗುತ್ತಿದ್ದಂತೆಯೇ ತೆರಿಗೆ ಇಲಾಖೆ ಸಹ ತನ್ನ ಕಾರ್ಯ ಪ್ರಾರಂಭಿಸಿದ್ದು, 14 ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದಿದೆ.
ರೊಟೊಮ್ಯಾಕ್ ಜಾಗತಿಕ ಕಂಪನಿಯ ಮಾಲೀಕ ವಿಕ್ರಮ್ ಕೊಠಾರಿ ಚಿತ್ರ
ರೊಟೊಮ್ಯಾಕ್ ಜಾಗತಿಕ ಕಂಪನಿಯ ಮಾಲೀಕ ವಿಕ್ರಮ್ ಕೊಠಾರಿ ಚಿತ್ರ

ನವದೆಹಲಿ: ರೊಟೊಮ್ಯಾಕ್ ನಿಂದ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಿಬಿಐ ಹಾಗೂ ಇಡಿ ಕಾರ್ಯಪ್ರವೃತ್ತವಾಗುತ್ತಿದ್ದಂತೆಯೇ ತೆರಿಗೆ ಇಲಾಖೆ ಸಹ ತನ್ನ ಕಾರ್ಯ ಪ್ರಾರಂಭಿಸಿದ್ದು, 14 ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದಿದೆ.

ರೊಟೊಮ್ಯಾಕ್ ಸಂಸ್ಥೆಯ ಮಾಲೀಕರು ವಿವಿಧ ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲದ ಮೊತ್ತೆ 3695 ಕೋಟಿ ರೂಪಾಯಿಯಷ್ಟಾಗಿದ್ದು. ಸಾಲ ತೀರಿಸದೇ ಸಂಸ್ಥೆಯ ಮಾಲಿಕರು ನಾಪತ್ತೆಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಜಾಗೃತವಾಗುತ್ತಿದ್ದಂತೆಯೇ ಆದಾಯ ತೆರಿಗೆ ಇಲಾಖೆ ಸಹ ಜಾಗೃತವಾಗಿದ್ದು, ತೆರಿಗೆ ವಂಚನೆ ಆರೋಪದಡಿಯಲ್ಲಿ ಸಂಸ್ಥೆಗೆ ಸೇರಿದ 14 ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದಿದೆ.  
 
ಉತ್ತರ ಪ್ರದೇಶದ ವಿವಿಧ ಬ್ಯಾಂಕ್ ಗಳ 11 ಖಾತೆಗಳನ್ನು ಫೆ.19 ರಂದೇ ವಶಕ್ಕೆ ಪಡೆಯಲಾಗಿತ್ತು, ಉಳಿದ 3 ಖಾತೆಗಳಿಗೆ ಒಂದು ತಿಂಗಳ ಮುನ್ನವೇ ನಿರ್ಬಂಧ ವಿಧಿಸಲಾಗಿತ್ತು ಎಂದು ತಿಳಿದುಬಂದಿದೆ. ಬಾಕಿ ಇರುವ ತೆರಿಗೆಯನ್ನು ಪಾವತಿ ಮಾಡುವುದಕ್ಕಾಗಿ ಖಾತೆಗಳನ್ನು ವಶಕ್ಕೆ ಪಡೆಯಲಾಗಿದ್ದು ಇವುಗಳಿಂದ ಸುಮಾರು 85 ಕೋಟಿ ರೂಪಾಯಿ ಲಭ್ಯವಾಗಿದೆ, 11 ಖಾತೆಗಳು ರೊಟೊಮ್ಯಾಕ್ ಸಮೂಹ ಸಂಸ್ಥೆಗಳ ಹೆಸರಿನಲ್ಲಿದ್ದರೆ 3 ಖಾತೆಗಳು ಕೊಠಾರಿ ಕುಟುಂಬ ಸದಸ್ಯರಿಗೆ ಸೇರಿದ್ದಾಗಿದೆ ಎಂದು ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com